27.7 C
Sullia
Sunday, March 8, 2026

ಆಭರಣ ಪ್ರಿಯರಿಗೆ ಗುಡ್​ನ್ಯೂಸ್​ !!ಬೆಲೆಯಲ್ಲಿ ಭಾರೀ ಇಳಿಕೆ,ದೀಪಾವಳಿ ಧಮಾಕ..!!

ನ್ಯೂಸ್ ನಾಟೌಟ್ : ಚಿನ್ನಾಭರಣಗಳ ಬೆಲೆಯಲ್ಲಿ ಸತತ ಏರಿಕೆ ಆಗುತ್ತಿದೆ. ಇದು ಆಭರಣ ಪ್ರಿಯರಿಗೆ ತುಂಬಾ ಬೇಸರ ತರಿಸಿದೆ. ಆದರೆ ಕಳೆದ ಹಲವು ತಿಂಗಳುಗಳಿಂದ ದರದಲ್ಲಿ ಹೆಚ್ಚಳ ಆಗುತ್ತಿದ್ದ ಬಂಗಾರ, ದೆಹಲಿಯಲ್ಲಿ ಇಂದು ಭಾರೀ ಮಟ್ಟದಲ್ಲಿ ಇಳಿಕೆ ಕಂಡಿರುವುದು ಗ್ರಾಹಕರಿಗೆ ಖುಷಿ ತರಿಸಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ದೆಹಲಿಯಲ್ಲಿ ಚಿನ್ನದ ದರ ಭಾರೀ ಪ್ರಮಾಣದಲ್ಲಿ ಏರಿಕೆ ಆಗಿತ್ತು. ರಾಜಧಾನಿಯಲ್ಲಿ 10 ಗ್ರಾಂ ಚಿನ್ನ ಬರೋಬ್ಬರಿ 1,34,800 ರೂಪಾಯಿ ಆಗಿತ್ತು. ಆದರೆ ಈಗ ಈ ಬೆಲೆಯಲ್ಲಿ 2,400 ರೂಪಾಯಿ ಕಡಿಮೆ ಆಗಿದ್ದು 1,32,400 ರೂಪಾಯಿಗೆ ಇಳಿಕೆ ಆಗಿದೆ. ಆದರೂ ಈ ಹಣ ದೊಡ್ಡಮಟ್ಟದ್ದೇ ಆಗಿದೆ. ದೀಪಾವಳಿಗೆ ಬಂಗಾರ ಕೊಂಡುಕೊಳ್ಳಬೇಕು ಎನ್ನುವವರಿಗೆ ಇದು ಕೊಂಚ ಸಮಾಧಾನಕರ ವಿಷಯವಾಗಿದೆ.

ಅಖಿಲ ಭಾರತ ಸರಾಫಾ ಸಂಘದ ಪ್ರಕಾರ, ಶೇಕಡಾ 99.9 ರಷ್ಟು (24 karat) ಶುದ್ಧ ಇರುವಂತಹ ಬಂಗಾರ ಶುಕ್ರವಾರ ಅಂದರೆ ಅಕ್ಟೋಬರ್​ 17 ರಂದು 10 ಗ್ರಾಂಗೆ 3,200 ರೂಪಾಯಿ ಏರಿಕೆ ಆಗಿ ಸಾರ್ವಕಾಲಿಕ ಗರಿಷ್ಠ 1,34,800 ರೂಪಾಯಿಗೆ ತಲುಪಿತ್ತು. ಆದರೆ ಈ ಬೆಲೆಯಲ್ಲಿ 2,400 ರೂಪಾಯಿ ಕಡಿಮೆ ಆಗಿದ್ದು 1,32,400 ರೂಪಾಯಿಗೆ 10 ಗ್ರಾಂ ಚಿನ್ನ ಖರೀದಿಸಬಹುದು. ಒಂದು ಗ್ರಾಂ ಚಿನ್ನಕ್ಕೆ 13,240 ರೂಪಾಯಿ ಆಗಿದೆ.     

Related Articles

LEAVE A REPLY

Please enter your comment!
Please enter your name here

Latest Articles