ನ್ಯೂಸ್ ನಾಟೌಟ್ : ಮದುವೆಯ ವೇದಿಕೆಯ ಮೇಲೆ 21 ವರ್ಷದ ಹುಡುಗ ಅಜ್ಜಿಯ ವಯಸ್ಸಿನ ಮಹಿಳೆಯೊಂದಿಗೆ ಮದುವೆಯಾಗಿದ್ದಾನೆ. ಹೌದು, ಇದು ಅಚ್ಚರಿಯಾದರೂ ನಿಜ.
ಇಬ್ಬರೂ ಕೊರಳಿಗೆ ಹಾರ ಹಾಕಿಕೊಂಡಿದ್ದಾರೆ. ಇಬ್ಬರೂ ಮದುವೆಯಾಗಿದ್ದೀರಾ? ಎಂದು ಯಾರೋ ಆ ಯುವಕನನ್ನ ಕೇಳಿದ್ದಾರೆ. ಆಗ ಆತ ಹೌದು ಎಂದು ಉತ್ತರಿಸಿದ. ಆಗ ಆ ವ್ಯಕ್ತಿ ಯುವಕನ ವಯಸ್ಸು ಕೇಳಿದಾಗ ಆತನಿಗೆ 21 ವರ್ಷ ಮತ್ತು ಮಹಿಳೆಗೆ 52 ವರ್ಷ ಎಂದು ಹೇಳಿದ್ದಾನೆ. ಈ ಜೋಡಿಯ ಫೋಟೋ ಮತ್ತು ವಿಡಿಯೋಗಳು ಈಗ ಸಖತ್ ಸೌಂಡ್ ಮಾಡುತ್ತಿವೆ. ಅನೇಕರು ವಿವಿದ ರೀತಿಯಲ್ಲಿ ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನೂ ಕೆಲವರು ಈ ಜೋಡಿಗೆ ಶುಭ ಹಾರೈಸಿದ್ದಾರೆ. ಇದಕ್ಕೆ ಹೇಳುವುದು ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಅಂತಾ. ಪ್ರೀತಿ-ಪ್ರೇಮಕ್ಕೆ ಯಾವುದೇ ರೀತಿಯ ವಯಸ್ಸಿನ ಮೀತಿಯಿಲ್ಲ. ಹೀಗಾಗಿಯೇ ಇಂದು ಅನೇಕರು ವಯಸ್ಸನ್ನೂ ಮೀರಿ ಮದುವೆಯಾಗುತ್ತಿದ್ದಾರೆ.ಸದ್ಯ ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ಬಾರಿ ವೈರಲ್ ಆಗುತ್ತಿದೆ.













