ವಿದ್ಯಾರ್ಥಿ ಪರಿಷತ್ನಿಂದ ನಾಯಕತ್ವ, ಸಂವಹನ ಕೌಶಲ್ಯ ವೃದ್ಧಿ : ಡಾ. ಅರುಣ್ ಶ್ಯಾಮ್ ಎಂ.
ನ್ಯೂಸ್ ನಾಟೌಟ್: ಸುಳ್ಯದ ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಪರಿಷತ್ ಉದ್ಘಾಟನಾ ಕಾರ್ಯಕ್ರಮ ಸೋಮವಾರ (ಅ.13) ಕಾಲೇಜು ಸಭಾಂಗಣದಲ್ಲಿ ನೆರವೇರಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸೀನಿಯರ್ ಅಡ್ವೊಕೇಟ್ ಮತ್ತು ಫಾರ್ಮರ್ ಅಡಿಷನಲ್, ಅಡ್ವೊಕೇಟ್ ಜನರಲ್, ಕರ್ನಾಟಕ ಹಾಗೂ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಕೌನ್ಸಿಲ್ ಮೆಂಬರ್ ಡಾ. ಅರುಣ್ ಶ್ಯಾಮ್ ಎಂ. ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕಾನೂನು ಶಿಕ್ಷಣದ ಮಹತ್ವ ಹಾಗೂ ನೈತಿಕತೆಯ ಮೌಲ್ಯಗಳನ್ನು ವಿವರಿಸಿ ವಿದ್ಯಾರ್ಥಿ ಪರಿಷತ್ನ ಮೂಲಕ ಕಾಲೇಜಿನ ಅಭಿವೃದ್ಧಿಗೆ ಸಹಕಾರ ನೀಡುವಂತೆಯೇ, ನಾಯಕತ್ವ ಮತ್ತು ಸಂವಹನ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳುವ ಅವಕಾಶವನ್ನು ಪಡೆಯುತ್ತೀರಿ. ಕಾಲೇಜಿನ ಹೆಮ್ಮೆ ಹೆಚ್ಚಿಸುವ ರೀತಿಯಲ್ಲಿ ಕಾರ್ಯನಿರ್ವಹಿಸಿ, ಇತರರಿಗೆ ಪ್ರೇರಣೆಯಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ), ಸುಳ್ಯ ಅಧ್ಯಕ್ಷರು ಹಾಗೂ ವೈದ್ಯಕೀಯ ನಿರ್ದೇಶಕರಾದ ಡಾ. ಕೆ.ವಿ. ಚಿದಾನಂದ ಮಾತನಾಡಿ, ನಾಯಕತ್ವ ಎಂದರೆ ಅಧಿಕಾರವಲ್ಲ, ಅದು ಜವಾಬ್ದಾರಿ. ಪರಿಷತ್ನ ಪ್ರತಿಯೊಬ್ಬ ಸದಸ್ಯರು ಕಾಲೇಜಿನ ಶಿಸ್ತು, ಒಗ್ಗಟ್ಟು ಮತ್ತು ಅಭಿವೃದ್ಧಿಗೆ ಕೊಡುಗೆ ನೀಡಬೇಕು. ವಿದ್ಯಾರ್ಥಿ ಪರಿಷತ್ ಒಂದು ಸೇತುವೆಯಂತಿದ್ದು, ಅದು ವಿದ್ಯಾರ್ಥಿ ಸಮುದಾಯ ಮತ್ತು ನಿರ್ವಹಣಾ ಮಂಡಳಿಯ ನಡುವೆ ಸಂಪರ್ಕ ಸಾಧಿಸುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲರು ಪ್ರೊ. ಟೀನಾ ಹೆಚ್.ಎಸ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಕಲಾವತಿ ಎಂ, ವಿದ್ಯಾರ್ಥಿ ಸಂಘದ ನಾಯಕ ನಾಚಪ್ಪ ಸಿ.ಎನ್, ಉಪನಾಯಕ ನಿಹಾಲ್ ಎಮ್. ಡಿ., ಕಾರ್ಯದರ್ಶಿ ವಿಜಯ್ ಕೆ, ಕ್ರೀಡಾಕಾರ್ಯದರ್ಶಿ ಉಮ್ಮರ್ ಮುಕ್ತಾರ್ , ಜತೆ ಕಾರ್ಯದರ್ಶಿ ಅನಘ. ಕೆ. ಪಿ., ಕ್ರೀಡಾ ಜತೆ ಕಾರ್ಯದರ್ಶಿ ವಿದ್ಯಾಶ್ರೀ ರೈ, ಸಾಂಸ್ಕೃತಿಕ ಕಾರ್ಯದರ್ಶಿ ಸಚಿನ್ ರೈ, ಸಾಂಸ್ಕೃತಿ ಕ ಜತೆ ಕಾರ್ಯದರ್ಶಿ ವನ್ಯಶ್ರೀ ಕೆ ಎಚ್ ಉಪಸ್ಥಿತರಿದ್ದರು.
ಬಳಿಕ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳಿಗೆ ಬ್ಯಾಡ್ಜ್ ಗಳನ್ನು ಪ್ರದಾನ ಮಾಡುವ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿನಿಯರಾದ ಹಂಸಿನಿ ಹಾಗೂ ಪೂರ್ಣಿಮಾ ಸ್ವಾಗತ ನೃತ್ಯ ಮಾಡಿದರು, ರಮ್ಯಾ, ಚಂದನ ಹಾಗೂ ಶ್ರೇಯ ಪ್ರಾರ್ಥಿಸಿದರು. ಪ್ರೊ. ಟೀನಾ ಹೆಚ್.ಎಸ್ ಸ್ವಾಗತಿಸಿದರು. ಪ್ರೊ. ಕಲಾವತಿ ಎಂ. ಪ್ರತಿಜ್ಞಾ ವಿಧಿ ಬೋಧಿಸಿದರು, ಉಷಾ ಸಿ. ಶೆಟ್ಟಿ ಪರಿಚಯ ವಾಚಿಸಿದರು. ಪ್ರೊ. ಕೃತಿಕಾ ಜೆ ವಂದಿಸಿದರು. ಆಫೀಸ್ ಸೂಪರಿಂಟೆಂಡೆಂಟ್ ಸೌಮ್ಯ ನಿರೂಪಿಸಿದರು. ಈ ಸಂಧರ್ಭ ಎ.ಒ.ಎಲ್.ಇ (ರಿ), ಸುಳ್ಯ ಇದರ ಉಪಾಧ್ಯಕ್ಷೆ ಶೋಭಾ ಚಿದಾನಂದ, ಪ್ರಧಾನ ಕಾರ್ಯದರ್ಶಿ ಅರ್ಕಿಟೆಕ್ಟ್ ಅಕ್ಷಯ್ ಕೆ.ಸಿ., ಕಾರ್ಯದರ್ಶಿ ಹಾಗೂ
ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಕೆ. ವಿ. ಹೇಮಾನಾಥ್, ಕೆ.ವಿ.ಜಿ. ಕಾನೂನು ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಕೆ ವಿ ದಾಮೋದರ ಗೌಡ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ ಲೀಲಾಧರ್ ಡಿ. ವಿ ಉಪಸ್ಥಿತರಿದ್ದರು.













