27.7 C
Sullia
Sunday, March 8, 2026

ಎಂಗೇಜ್ ಮೆಂಟ್ ಬಳಿಕ ಕೀರ್ತಿ ಸುರೇಶ್ ಜತೆ ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ದೇವರಕೊಂಡ!!?ಫೋಟೋ ವೈರಲ್..!

ನ್ಯೂಸ್ ನಾಟೌಟ್ :ಇತ್ತೀಚೆಗಷ್ಟೇ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಎಂಗೇಜ್ ಮೆಂಟ್ ಆಗಿದ್ದಾರೆ ಅನ್ನೋ ಸುದ್ದಿ ಒಡಾಡುತ್ತಿತ್ತು. ಇದೀಗ ವಿಜಯ್ ದೇವರಕೊಂಡ ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡ ಹೊಸ ಸಿನಿಮಾ ಸೆಟ್ಟೇರಿದೆ. ಈ ಸಿನಿಮಾದ ಮುಹೂರ್ತದ ಫೋಟೋಗಳು ವೈರಲ್ ಆಗಿವೆ. ಈ ಸಿನಿಮಾ ಬಗ್ಗೆ ಬಾರಿ ನಿರೀಕ್ಷೆ ಮೂಡಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಚಿತ್ರಕ್ಕೆ ಕ್ಲಾಪ್ ಮಾಡಿದ್ದಾರೆ. ನಿರ್ಮಾಪಕ ನಿರಂಜನ್ ರೆಡ್ಡಿ ಕ್ಯಾಮೆರಾ ಆನ್ ಮಾಡಿದರು. ನಿರ್ದೇಶಕ ಹನು ರಾಘವಪುಡಿ ಮೊದಲ ದೃಶ್ಯವನ್ನು ನಿರ್ದೇಶಿಸಿದರು ಅನ್ನೋದು ವಿಶೇಷ.  

ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ದಿಲ್ ರಾಜು ಮತ್ತು ಶಿರೀಶ್ ಈ ಸಿನಿಮಾನ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ SVC 59 ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದಿಂದ ವಿಜಯ್​ಗೆ ಗೆಲುವು ಸಿಗುತ್ತದೆಯೇ ಎನ್ನುವ ಕುತೂಹಲ ಮೂಡಿದೆ

Related Articles

LEAVE A REPLY

Please enter your comment!
Please enter your name here

Latest Articles