ನ್ಯೂಸ್ ನಾಟೌಟ್ : ನಿಜಕ್ಕೂ ಇದೊಂದು ಮನಸ್ಸು ಭಾರವಾಗುವ ವಿಚಾರ, ಹೆಜ್ಜೇನು ದಾಳಿಗೆ ಇನ್ನೂ ಬಾಳಿ ಬದುಕಬೇಕಾಗಿದ್ದ ಪುಟ್ಟ ಕಂದಮ್ಮ ಸಾವನ್ನಪ್ಪಿದ್ದಾಳೆ. 2ನೇ ತರಗತಿ ವಿದ್ಯಾರ್ಥಿನಿ ಗಂಭೀರವಾಗಿ
ಗಾಯಗೊಂಡಿದ್ದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.ವಿದ್ಯಾರ್ಥಿನಿ ಜಿಶಾ (7) ಮೃತ ಬಾಲಕಿ.ಪಡೂರು ಗ್ರಾಮದ ಕೂಟೇಲು ನಿವಾಸಿ ಕಿರಣ್ ಅವರ ಪುತ್ರಿ.
ಇನ್ನೋರ್ವ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ರಕ್ಷಣೆಗೆ ಧಾವಿಸಿ ಹೆಜ್ಜೇನು ಕಡಿತಕ್ಕೆ ಒಳಗಾಗಿದ್ದ ಸ್ಥಳೀಯರೊಬ್ಬರು ಚೇತರಿಸಿಕೊಂಡಿದ್ದಾರೆ.ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 2ನೇ ತರಗತಿಯಲ್ಲಿ ಓದುತ್ತಿದ್ದಳು. ಅದೇ ಶಾಲೆಯ 5ನೇ ತರಗತಿಯ ವಿದ್ಯಾರ್ಥಿ ಪ್ರತ್ಯುಶ್ (10) ಚಿಕಿತ್ಸೆ ಪಡೆಯುತ್ತಿರುವ ಬಾಲಕ ಎಂದು ತಿಳಿದು ಬಂದಿದೆ.
ಮಕ್ಕಳಿಬ್ಬರೂ ಅ. 10ರಂದು ಸಂಜೆ ಸೇಡಿಯಾಪು ಕೂಟೇಲು ಸಮೀಪ
ಶಾಲೆಯ ವಾಹನದಿಂದ ಇಳಿದು ಸಮೀಪದಲ್ಲೇ ಇರುವ ಮನೆಯತ್ತ
ತೆರಳುತ್ತಿದ್ದಾಗ ಏಕಾಏಕಿ ಹೆಜ್ಜೇನು ದಾಳಿ ಮಾಡಿದ್ದವು. ಮಕ್ಕಳ
ಚೀರಾಟ ಕೇಳಿ ಸ್ಥಳೀಯರಾದ ನಾರಾಯಣ (40) ರಕ್ಷಣೆಗೆ
ಧಾವಿಸಿದ್ದರು. ಅವರ ಮೇಲೂ ದಾಳಿ ಮಾಡಿದವು.
ತತ್ಕ್ಷಣ ಮೂವರನ್ನೂ ಪುತ್ತೂರಿನ ವಿವಿಧ ಆಸ್ಪತ್ರೆಗಳಿಗೆ
ದಾಖಲಿಸಲಾಗಿತ್ತು. ತೀವ್ರ ಅಸ್ವಸ್ಥಗೊಂಡಿದ್ದ ದಿಶಾಳನ್ನು ಹೆಚ್ಚಿನ
ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಆಕೆ
ಮೃತಪಟ್ಟಿದ್ದಾಳೆ.
ಗಂಭೀರವಾಗಿ ಗಾಯಗೊಂಡಿದ್ದ ಪ್ರತ್ಯುಶ್ನ ಆರೋಗ್ಯದಲ್ಲೂ
ಏರುಪೇರಾಗಿದ್ದು, ಆತನನ್ನೂ ಮಂಗಳೂರಿನ ಆಸ್ಪತ್ರೆಗೆ
ಸ್ಥಳಾಂತರಿಸಲಾಗಿದೆ. ನಾರಾಯಣ ಚೇತರಿಸಿಕೊಳ್ಳುತ್ತಿದ್ದಾರೆ ಎಂದು
ತಿಳಿದುಬಂದಿದೆ. ಏಕೈಕ ಪುತ್ರಿ ಇಶಾ ಸಾವಿನಿಂದ ಕುಟುಂಬದಲ್ಲಿ
ಆಕ್ರಂದನ ಮುಗಿಲು ಮುಟ್ಟಿದೆ. ಮೃತಳು ಹೆತ್ತವರನ್ನು ಅಗಲಿದ್ದಾಳೆ.













