21.6 C
Sullia
Sunday, March 8, 2026

ಸುಳ್ಯ:ಬಾಲಕ ಬಾಲಕಿಯರ ಜಿಲ್ಲಾ ಮಟ್ಟದ ಕಬಡ್ಡಿ ಕೂಟ,ಹಲವು ತಂಡಗಳು ಭಾಗಿ,ರೋಮಾಂಚನಕಾರಿ ಪಂದ್ಯ

ನ್ಯೂಸ್ ನಾಟೌಟ್ : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಸುಳ್ಯ ಹಾಗೂ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಸುಳ್ಯ ಪ್ರಯೋಜಕತ್ವದಲ್ಲಿ ಆಯೋಜಿಸಿದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕಬಡ್ಡಿ ಟೂರ್ನಮೆಂಟ್ ಉದ್ಘಾಟನಾ ಸಮಾರಂಭವು ಅಕ್ಟೋಬರ್ 11 ರಂದು ಶನಿವಾರ ಬೆಳಿಗ್ಗೆ 9.30ಕ್ಕೆ ಸುಳ್ಯ ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿರುವ ಶಾರದೋತ್ಸವ ಪೆಂಡಾಲ್‌ನಲ್ಲಿ ಜರುಗಿತು.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಕ್ರೀಡಾ ಸ್ಪೂರ್ತಿ ಯಿಂದ ಆಟ ಆಡಿ ಗೆಲುವು ಸೋಲು ಎರಡನ್ನೂ ಖುಷಿಯಿಂದ ಸ್ವೀಕರಿಸಿ ಅದುವೇ ನಿಜವಾದ ಗೆಲುವು” – ಅರ್ಕಿಟೆಕ್ಟ್ ಅಕ್ಷಯ್ ಕೆ. ಸಿ

ಕಾರ್ಯಕ್ರಮದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಅರ್ಕಿಟೆಕ್ಟ್ ಅಕ್ಷಯ್ ಕೆ.ಸಿ.ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ರೀಡಾ ಸ್ಪೂರ್ತಿ ಯಿಂದ ಆಟ ಆಡಿ ಗೆಲುವು ಸೋಲು ಎರಡನ್ನೂ ಖುಷಿಯಿಂದ ಸ್ವೀಕರಿಸಿ ಅದುವೇ ನಿಜವಾದ ಗೆಲುವು ಎಂದು ಸ್ಫೂರ್ತಿ ದಾಯಕ ಮಾತುಗಳೊಂದಿಗೆ ಶುಭ ಹಾರೈಸಿದರು.

ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಕ್ರೀಡಾ ಸಂಯೋಜಕರಾದ ಪ್ರೇಮನಾಥ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು “ವಿದ್ಯಾರ್ಥಿಗಳಲ್ಲಿ ಕ್ರೀಡಾಸ್ಫೂರ್ತಿಯನ್ನು ಬೆಳೆಸುವಂತಹ ಈ ರೀತಿಯ ಸ್ಪರ್ಧೆಗಳು ಅವರ ಶಾರೀರಿಕ ಹಾಗೂ ಮಾನಸಿಕ ವಿಕಸನಕ್ಕೆ ಸಹಕಾರಿ” ಎಂದು ಹೇಳಿದರು.

ವೇದಿಕೆಯಲ್ಲಿ ಅತಿಥಿಗಳಾಗಿ ನೆಹರೂ ಸ್ಮಾರಕ ಪಿಯು ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೆರಾಲು, ಶ್ರೀ ಶಾರದಾಂಬ ಸೇವಾ ಸಮಿತಿಯ ಗೌರವಾಧ್ಯಕ್ಷರು ಗೋಕುಲದಾಸ್, ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರು ಡಾ ರುದ್ರ ಕುಮಾರ್ ಎಂ. ಎಂ, ಎನ್.ಎಂ. ಪಿ ಯು. ಸಿ ಪ್ರಾಂಶುಪಾಲರು ಮಿಥಾಲಿ ಪಿ ರೈ,
ಹಾಗೂ ನೆಹರೂ ಮೆಮೋರಿಯಲ್ ಪಿಯು ಕಾಲೇಜಿನ ಕಬಡ್ಡಿ ತರಬೇತುದಾರ ನಾಗರಾಜ ನಾಯಕ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಬೇಬಿ ವಿದ್ಯಾ ಪಿ. ಬಿ, ಉಪಸ್ಥಿತರಿದ್ದರು.

ಹಾಗೂ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿಯಲ್ಲಿ ದೊಡ್ಡಣ್ಣ ಬರಮೇಲು, ಪ್ರಭಾಕರ್ ನಾಯರ್, ಎ. ಸಿ ವಸಂತ್, ಶೋಭಾ ಬೊಮ್ಮೆಟ್ಟಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಶರಣ್ಯ ಮತ್ತು ಬಳಗದವರು ಆಶಯ ಗೀತೆ ಹಾಡಿದರು, ಬೇಬಿ ವಿದ್ಯಾ ಪಿ.ಬಿ. ಸ್ವಾಗತಿಸಿದರು, ಮಿಥಾಲಿ ಪಿ ರೈ ವಂದಿಸಿ, ಉಪನ್ಯಾಸಕರಾದ ಸಾವಿತ್ರಿ ಕೆ ಹಾಗೂ ರೇಷ್ಮಾ ಎಂ. ನಿರೂಪಿಸಿದರು.ಸಭಾ ಕಾರ್ಯಕ್ರಮದ ಬಳಿಕ ತೆಂಗಿನಕಾಯಿ ಒಡೆಯುವುದರೊಂದಿಗೆ ಕ್ರೀಡಾಂಗಣನವನ್ನು ಉದ್ಘಾಟಿಸಲಾಯಿತು. ಬಳಿಕ ವಿದ್ಯಾರ್ಥಿನಿ ಶ್ರೇಯ ಶಾಸ್ತ್ರೀಯ ನೃತ್ಯಕ್ಕೆ ಹೆಜ್ಜೆ ಹಾಕಿದರು ಇದರೊಂದಿಗೆ ಕಬಡ್ಡಿ ಪಂದ್ಯಾಟ ಪ್ರಾರಂಭವಾಯಿತು.

Related Articles

LEAVE A REPLY

Please enter your comment!
Please enter your name here

Latest Articles