27.7 C
Sullia
Sunday, March 8, 2026

ಪ್ರಸಿದ್ಧ ನಟ ಮಂಗಳೂರಿನಲ್ಲಿ ಬಂಧನ! ಯಾವ ಕಾರಣಕ್ಕೆ? ಇಲ್ಲಿದೆ ಮಾಹಿತಿ..

ನ್ಯೂಸ್ ನಾಟೌಟ್ ; ಕೇರಳ ಚಿತ್ರರಂಗದ ನಟ ಜಯಕೃಷ್ಣನ್ (Jayakrishan.N) ಅವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.ಕ್ಯಾಬ್ ಚಾಲಕನಿಗೆ ಟೆರರಿಸ್ಟ್ ಎಂದು ಬೈದಿರುವ ಕಾರಣಕ್ಕೆ ಬಂಧಿಸಲಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಅವರೊಂದಿಗೆ ಇದ್ದ ಸಂತೋಷ್ ಅಬ್ರಾಹಂನನ್ನೂ ಬಂಧಿಸಿದ್ದು, ಇನ್ನೋರ್ವ ಆರೋಪಿ ವಿಮಲ್ ನಾಪತ್ತೆಯಾಗಿದ್ದಾರೆ. ಕಳೆದ ಅ.9 ರಂದು ಈ ಮೂವರು ಆ್ಯಪ್ ಮೂಲಕ ಮಂಗಳೂರಿನ ಬಿಜೈಗೆ ಕ್ಯಾಬ್ ಬುಕ್ ಮಾಡಿದ್ದರು. ಅಹ್ಮದ್ ಶಫೀಕ್ ಎಂಬವರು ಕರೆ ಮಾಡಿ ವಿಚಾರಿಸಿದ್ದರು. ಈ ವೇಳೆ ಹಿಂದಿ, ಮಲಯಾಳಂ ಭಾಷೆಯಲ್ಲಿ ಮಾತನಾಡಿದ ಆರೋಪಿಗಳು, ನೀನು ಮುಸ್ಲಿಂ ತೀವ್ರವಾದಿ, ಟೆರರಿಸ್ಟ್ ಎಂದು ಅವಾಚ್ಯವಾಗಿ ಬೈದಿದ್ದಾರೆ ಎಂದು ಈ ಬಗ್ಗೆ ಕ್ಯಾಬ್ ಚಾಲಕ ಅಹ್ಮದ್ ಶಫೀಕ್, ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀರು ಇಬ್ಬರನ್ನು ಬಂಧಿಸಿದ್ದು, ಮತ್ತೋರ್ವನಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಬಿಎನ್‌ಎಸ್ 352, 353(2) ಅಡಿ ಪ್ರಕರಣ ದಾಖಲಾಗಿದೆ.

Related Articles

LEAVE A REPLY

Please enter your comment!
Please enter your name here

Latest Articles