ನ್ಯೂಸ್ ನಾಟೌಟ್ ; ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾಗೆ ಅಶ್ಲೀಲ ಕಮೆಂಟ್ ಹಾಕಿದ ನಟ ದರ್ಶನ್ ಅಭಿಮಾನಿಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.ಸೈಬರ್ ಪೊಲೀಸರು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಕೊ* ಆರೋಪಿ ನಟ ದರ್ಶನ್ ಮೇಲಿನ ಅಂಧಾಭಿಮಾನಕ್ಕೆ ಹುಚ್ಚಾಟ ಮೆರೆದಿದ್ದ ಅಭಿಮಾಗಳಿಗೆ ಪೊಲೀಸರು ಸರಿಯಾಗಿ ಬರೆ ಎಳೆದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್ ಮಾಡಿದ 11 ಅರೋಪಿಗಳ ಮೇಲೆ, ಸೈಬರ್ ಪೊಲೀಸರು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದು, ಸುಮಾರು 380 ಪುಟಗಳಿರುವ ಚಾರ್ಜ್ಶೀಟ್ನಲ್ಲಿ ದೂರುದಾರೆ ರಮ್ಯಾ ಸ್ಟೇಟ್ಮೆಂಟ್, ಎಫ್ಎಸ್ಎಲ್ ವರದಿ, ಅರೋಪಿಗಳ ಸ್ವ-ಇಚ್ಛಾ ಹೇಳಿಕೆಗಳಿವೆ. ಸಾಕ್ಷ್ಯಾಧಾರಗಳು ಲಭಿಸಿದ ಹಿನ್ನೆಲೆ ಹಾಗು 60 ದಿನಗಳ ಗಡುವು ಮುಗಿಯುತ್ತಾ ಬಂದ ಹಿನ್ನೆಲೆಯಲ್ಲಿ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಅಶ್ಲೀಲ ಕಮೆಂಟ್ ಹಾಕಿದ ಇನ್ನೂ 6 ಆರೋಪಿಗಳಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಅವರು ಸಿಕ್ಕ ಕೂಡಲೇ ಹೆಚ್ಚುವರಿ ಚಾರ್ಜ್ಶೀಟ್ನನ್ನು ಪೊಲೀಸರು ಕೋರ್ಟ್ಗೆ ಸಲ್ಲಿಸಲಿದ್ದಾರೆ. ಇನ್ನೇನು ಕೋರ್ಟ್ ಟ್ರಯಲ್ಗೆ ಸಕಲ ಸಿದ್ಧತೆ ಆರಂಭಿಸಿದೆ. ಆದ್ರೆ ಅಶ್ಲೀಲ ಕಮೆಂಟ್ ಹಾಕಿದ 4 ಆರೋಪಿಗಳಿಗೆ ಸದ್ಯಕ್ಕೆ ಬಿಡುಗಡೆ ಭಾಗ್ಯ ಇಲ್ಲದಂತಾಗಿದೆ. ಇದೀಗ ಅಶ್ಲೀಲ ಕಮೆಂಟ್ ಹಾಕಿದ ಅಭಿಮಾನಿಗಳಿಗೆ ಪೊಲೀಸರು ಸರಿಯಾಗಿಯೆ ಡ್ರಿಲ್ ನಡೆಸಿದ್ದಾರೆ.













