ನ್ಯೂಸ್ ನಾಟೌಟ್ : ಬಿಗ್ಬಾಸ್ ಕನ್ನಡ ರಿಯಾಲಿಟಿ ಶೋಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿ ಒಂದು ವಾರವಷ್ಟೇ ಮುಗಿದು, ಎರಡನೇ ವಾರಕ್ಕೆ ಕಾಲಿಟ್ಟಿತ್ತು. ಅಷ್ಟರಲ್ಲಾಗಲೇ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ತಹಶೀಲ್ದಾರ್, ಬಿಗ್ಬಾಸ್ ಶೋ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿದಿದೆ.ಬಳಿಕ ಕಂಟೆಸ್ಟಟ್ಗಳನ್ನ ಎಲಿಮಿನೇಟ್ ಮಾಡಿದ್ದಾರೆ.
ಬಿಗ್ಬಾಸ್ ಶೋ ನಡೀತಾ ಇದ್ದಿದ್ದು ರಾಮನಗರದಲ್ಲಿರೋ ಅಮ್ಯೂಸ್ಮೆಂಟ್ ಪಾರ್ಕ್ ಜಾಲಿವುಡ್ ಸ್ಟುಡಿಯೋ ಆವರಣದಲ್ಲಿ. ಆದ್ರೆ ಜಾಲಿವುಡ್ನವರು ಪರಿಸರ ಇಲಾಖೆಯ ನಿಯಮಗಳ ಉಲ್ಲಂಘನೆಯ ಆರೋಪ ಎದುರಿಸ್ತಿದ್ರು. ಗ್ರೀನ್ ಜೋನ್ನಲ್ಲಿದ್ರೂ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿರಲಿಲ್ಲ. ತ್ಯಾಜ್ಯ ನೀರನ್ನು ಸಂಸ್ಕರಣೆಯೇ ಮಾಡ್ತಿರ್ಲಿಲ್ಲ. ಹೀಗೆ ಪರಿಸರ ನಿಯಮ ಉಲ್ಲಂಘನೆ ಸಂಬಂಧಿತ ಹಲವು ಕಾರಣಗಳಿಗಾಗಿ ಒಂದು ವರ್ಷಕ್ಕಿಂತ ಹಿಂದೇನೇ ಜಾಲಿವುಡ್ಗೆ ನೋಟಿಸ್ ನೀಡಲಾಗಿತ್ತು. ಆದ್ರೆ ಯಾವುದೇ ನೋಟಿಸ್ಗೆ ಉತ್ತರಿಸದೆ ನಿರ್ಲಕ್ಷ್ಯ ಮಾಡಿದ ಹಿನ್ನೆಲೆ ನಿನ್ನೆ ರಾಮನಗರ ತಾಲೂಕು ಆಡಳಿತ ಜಾಲಿವುಡ್ನ ಸೀಲ್ ಮಾಡಿದೆ.
ನಿನ್ನೆ ಸಂಜೆ ಬಿಗ್ಬಾಸ್ ಮನೆಗೆ ಬೀಗ ಜಡೀತಿದ್ದಂತೆ ಆಯೋಜಕರು ಕಾರ್ಗಳಲ್ಲಿ 17 ಸ್ಪರ್ಧಿಗಳನ್ನ ಶಿಫ್ಟ್ ಮಾಡಿದ್ದಾರೆ. ಜಾಲಿವುಡ್ನಿಂದ ನೇರವಾಗಿ ಬಿಡದಿ ಬಳಿಯಿರೋ ಈಗಲ್ಟನ್ ರೆಸಾರ್ಟ್ಗೆ ಶಿಫ್ಟ್ ಮಾಡಿದ್ದಾರೆ. ಸುಮಾರು 15 ರೂಮ್ಗಳನ್ನ ಬುಕ್ ಮಾಡ್ಲಾಗಿದೆ.
ಮುಂದೆ ಏನು?
ಇದು ಜನರಲ್ಲಿ ಮೂಡುತ್ತಿರುವ ಪ್ರಶ್ನೆ.ಹಾಗಾದರೆ ಈ ಶೋ ನಿಲ್ಲುತ್ತಾ? ಅಥವಾ ಬೇರೆನಾದರೂ ಐಡಿಯಾ ಇದೆಯಾ?ಬಿಗ್ ಬಾಸ್ ಮನೆಗೆ ಬೀಗ ಜಡಿತ್ತಿಯುತ್ತಿದ್ದಂತೆ ವೀಕ್ಷಕರು ಶಾಕ್ ಆಗಿದ್ದಾರೆ. ಈ ಬಗ್ಗೆ ಕಲರ್ಸ್ ಕನ್ನಡ, ಅಡಚಣೆಗಾಗಿ ಕ್ಷಮೆ ಕೋರುತ್ತೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಷಾದ ವ್ಯಕ್ತಪಡಿಸಿದೆ. ಬಿಗ್ಬಾಸ್ ಶೋ ಕತೆ ಮುಂದೇನು ಅನ್ನೋದು ಪ್ರಶ್ನೆಯಾಗಿಯೇ ಉಳಿದಿದೆ. ಕೋರ್ಟ್ಗೆ ಹೋಗೋದಕ್ಕೆ ಬಿಗ್ಬಾಸ್ ಆಯೋಜಕರು ಚಿಂತನೆ ನಡೆಸಿದ್ದಾರೆ. ಒಟ್ಟಾರೆ ಕನ್ನಡಿಗರ ಮನೆಮಾತಾಗಿರುವ ಬಿಗ್ಬಾಸ್ ಶೋ ಅರ್ಧಕ್ಕೆ ಸ್ಟಾಪ್ ಆಗುವ ಆತಂಕ ಎದುರಾಗಿದ್ದು, ಕೋರ್ಟ್ನ ಕಟಕಟೆಯಲ್ಲಿ ಬಿಗ್ಬಾಸ್ ಭವಿಷ್ಯ ನಿರ್ಧಾರವಾಗಲಿದೆ.













