27.7 C
Sullia
Sunday, March 8, 2026

ಅಲ್ ಅಮೀನ್ ಅರಂಬೂರು – ಸ್ಪಟಿಕ ಮಹೋತ್ಸವ ಲೋಗೋ ಅನಾವರಣ


Ad Widget
Ad Widget
Ad Widget
Ad Widget
Ad Widget
Ad Widget
Ad Widget

ನ್ಯೂಸ್ ನಾಟೌಟ್: ಅಲ್ ಅಮೀನ್ ಯೂತ್ ಫೆಡರೇಷನ್ ಅರಂಬೂರು ಸಂಘಟನೆಯು ತನ್ನ 15ನೇ ವರ್ಷದ ಸಂವತ್ಸರವನ್ನು ಪ್ರವೇಶಿಸಿರುವ ಸಂದರ್ಭದಲ್ಲಿ, “ಸೌಹಾರ್ದತೆ ಮತ್ತು ಒಗ್ಗಟ್ಟಿನ 15 ವರ್ಷಗಳು” ಎಂಬ ಘೋಷ ವಾಕ್ಯದೊಂದಿಗೆ ಈ ವರ್ಷವನ್ನು “ಸ್ಪಟಿಕ ಮಹೋತ್ಸವ ವರ್ಷ” ಎಂದು ಘೋಷಿಸಿ ವರ್ಷಪೂರ್ತಿ ವೈವಿಧ್ಯಮಯ ಹಾಗೂ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಏರ್ಪಡಿಸುವ ಯೋಜನೆ ರೂಪಿಸಿದೆ.

ಈ ಕಾರ್ಯಕ್ರಮದ ಆರಂಭಿಕ ಭಾಗವಾಗಿ, ಸ್ಪಟಿಕ ಮಹೋತ್ಸವ ಲೋಗೋ ಬಿಡುಗಡೆ ಕಾರ್ಯಕ್ರಮವನ್ನು ದುಗ್ಗಲಡ್ಕದ ಮಸೀದಿಯ ವಠಾರದಲ್ಲಿ ನೆರವೇರಿಸಲಾಯಿತು.

ಕಾರ್ಯಕ್ರಮವಾದ ‘ಸ್ಪಟಿಕ ಮಹೋತ್ಸವ’ದ ಲೋಗೋವನ್ನು NPM ಝೈನುಲ್ ಆಬಿದೀನ್ ತಂಙಲ್ ದುಗ್ಗಲಡ್ಕ ರವರು ಅನಾವರಣ ಮಾಡಿ, ದುವಾಗೈದು, ಸಂಘಟನೆಯ ಧ್ಯೇಯ ಉದ್ದೇಶಗಳ ಕುರಿತು ಮಾಹಿತಿ ನೀಡಿ,

ಪರಿಸರ ಸಂರಕ್ಷಣೆ, ಶೈಕ್ಷಣಿಕ ಕಾರ್ಯಕ್ರಮ, ಆರೋಗ್ಯ ಶಿಬಿರ ಮತ್ತು ಸಾಂಸ್ಕೃತಿಕ-ಧಾರ್ಮಿಕ ಚಟುವಟಿಕೆಗಳನ್ನು ಒಳಗೊಂಡಂತೆ ಒಟ್ಟು 15 ಕಾರ್ಯಕ್ರಮಗಳನ್ನು ವರ್ಷದೊಳಗೆ ಹಮ್ಮಿಕೊಳ್ಳಲು ತೀರ್ಮಾನಿಸಿದ್ದೇವೆ. ಈ ಎಲ್ಲಾ ಕಾರ್ಯಕ್ರಮಗಳು ಸಮಾಜಮುಖಿ, ಶೈಕ್ಷಣಿಕ ಬೆಂಬಲ ಹಾಗೂ ಧಾರ್ಮಿಕ ಅರಿವು ಅಭಿವೃದ್ಧಿ ಮಹತ್ವದ ಹೆಜ್ಜೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಆಸಿಫ್ ಪನ್ನೆ, ಪ್ರಧಾನ ಕಾರ್ಯದರ್ಶಿ ನಿಸಾರ್ ಶೈನ್ ಸೇರಿದಂತೆ ಕಾರ್ಯಕಾರಿ ಸಮಿತಿಯ ಸದಸ್ಯರಾದ ಅಬ್ದುಲ್ಲಾ ಅರಂಬೂರು, ನಾಸಿರ್ ಪಾಲಡ್ಕ, ಮುನೀರ್ ಶೈನ್, ಮಿರಾಜ್ ಮಾಂಬ್ಲಿ, ಸಂಶುದ್ದೀನ್ ಮಾಂಬ್ಲಿ, ಆಶಿಕ್ ಸ್ಟಾರ್, ಶರೀಫ್ ಮಾಂಬ್ಲಿ, ರಾಶಿದ್ ಪಾಲಡ್ಕ, ಫಾರಿಸ್ ಮಾಂಬ್ಲಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Latest Articles