21.6 C
Sullia
Sunday, March 8, 2026

ಅಮ್ಮ ಕುರ್​ಕುರೆ ಕೊಡಿಸಿಲ್ಲವೆಂದು ಬಾಲಕ ಮಾಡಿದ್ದೇನು?ಪೊಲೀಸರು ಐದಾರು ಕುರ್​ಕುರೆ ಪ್ಯಾಕೆಟ್​​ಗಳನ್ನು ಆತನಿಗೆ ನೀಡಿದ್ದೇಕೆ?

ನ್ಯೂಸ್ ನಾಟೌಟ್ : 8 ವರ್ಷದ ಬಾಲಕನೊಬ್ಬ ತನ್ನ ತಾಯಿ ಮತ್ತು ಅಕ್ಕ ತನಗೆ ಕುರ್​ಕುರೆ ಕೊಡಿಸಿ ಎಂದಿದ್ದಕ್ಕೆ ಹೊಡೆದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿರುವ ಘಟನೆ ನಡೆದಿದೆ. ಅಮ್ಮನ ಮೊಬೈಲ್ ತೆಗೆದುಕೊಂಡು ಪೊಲೀಸ್ ತುರ್ತು ಸಹಾಯವಾಣಿ ನಂಬರ್ 112ಗೆ ಫೋನ್ ಮಾಡಿದ ಬಾಲಕ ಚಿಪ್ಸ್ ಪ್ಯಾಕೆಟ್ ಕೊಡಿಸಿ ಎಂದಿದ್ದಕ್ಕೆ ಅಮ್ಮ ಮತ್ತು ಅಕ್ಕ ಸೇರಿ ನನಗೆ ಹೊಡೆದಿದ್ದಾರೆ ಎಂದು ಹೇಳುತ್ತಾ ಅಳಲಾರಂಭಿಸಿದ್ದಾನೆ.ಈ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿಯ ಚಿತರ್‌ವೈ ಕಲಾ ಗ್ರಾಮದಲ್ಲಿ ನಡೆದಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಕುರ್ಕುರೆ ಪ್ಯಾಕೆಟ್ ಖರೀದಿಸಲು ಆ ಬಾಲಕ ತನ್ನ ತಾಯಿಯ ಬಳಿ 20 ರೂ. ಕೊಡುವಂತೆ ಕೇಳಿದ. ಅದಕ್ಕೆ ಆಕೆ ಒಪ್ಪಲಿಲ್ಲ. ಆತ ಹಠ ಮಾಡಿದಾಗ ಆ ತಾಯಿ ಮತ್ತು ಅವರ ಮಗಳು ಸೇರಿ ಆ ಬಾಲಕನನ್ನು ಹೊಡೆದಿದ್ದಾರೆ. ಇದರಿಂದ ನೊಂದ ಬಾಲಕ ಭಾರತದ ಪೊಲೀಸ್ ತುರ್ತು ಸಂಖ್ಯೆ 112ಗೆ ಕರೆ ಮಾಡಿದ.

ಈ ಕರೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಯುವಕ ತನ್ನ ಪರಿಸ್ಥಿತಿಯನ್ನು ವಿವರಿಸುತ್ತಿರುವಾಗ ಪೊಲೀಸ್ ಅಧಿಕಾರಿಯೊಬ್ಬರು ಶಾಂತವಾಗಿ ಅವನಿಗೆ ಧೈರ್ಯ ತುಂಬುತ್ತಿರುವುದು ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ. ಆ ಪೊಲೀಸ್ ಬಾಲಕನಿಗೆ ಸಮಾಧಾನ ಮಾಡಿದ್ದು ಮಾತ್ರವಲ್ಲದೆ ಆತನ ಅಮ್ಮನಿಗೆ ಇನ್ಮುಂದೆ ಆ ಮಗುವನ್ನು ಹೊಡೆಯಬೇಡಿ ಎಂದು ಹೇಳಿದ್ದಾರೆ. ನಂತರ ಆ ಮಗುವಿನ ಮನೆಗೆ ಹೋಗಿ ತಾವೇ ಐದಾರು ಕುರ್​ಕುರೆ ಪ್ಯಾಕೆಟ್​​ಗಳನ್ನು ಆತನಿಗೆ ನೀಡಿ ಸರ್​ಪ್ರೈಸ್ ಕೊಟ್ಟಿದ್ದಾರೆ

Related Articles

LEAVE A REPLY

Please enter your comment!
Please enter your name here

Latest Articles