ನ್ಯೂಸ್ ನಾಟೌಟ್ : ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು
ತಂಬಾಕು ಮುಕ್ತ ಎಂದು ಘೋಷಣೆ ಬೆನ್ನಲ್ಲೇ ಗ್ರಾಮ ಪಂಚಾಯತ್
ಅಂಗಡಿಗಳಿಗೆ ದಾಳಿ ನಡೆಸಿ ತಂಬಾಕು
ಉತ್ಪನ್ನ ಮಾರಾಟ ಮಾಡುತ್ತಿದ್ದವರಿಗೆ ದಂಡ ವಿಧಿಸಿದೆ.
ರಥ ಬೀದಿಯಲ್ಲಿ ಗುಟ್ಕಾ, ಬೀಡಿ, ಸಿಗರೇಟು, ಪಾನ್ ಪರಾಗ್ ಇತ್ಯಾದಿ
ಮಾರಾಟ ಮಾಡುತ್ತಿದ್ದ ಅಂಗಡಿಯವರಿಗೆ ಹಾಗೂ ಕಸ ಕಡ್ಡಿ ಪ್ಲಾಸ್ಟಿಕ್
ಇತ್ಯಾದಿಗಳನ್ನು ಎಲ್ಲೆಂದರಲ್ಲಿ ಎಸೆದು ನೈರ್ಮಲ್ಯ ಕಾಪಾಡದ ವ್ಯಾಪಾರಸ್ಥರಿಂದ ದಂಡ ವಸೂಲಿ ಮಾಡಿದೆ. ಮೂವರು
ವ್ಯಾಪಾರಸ್ಥರಿಗೆ ತಲಾ 500 ರೂಪಾಯಿ ದಂಡ ವಿಧಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಸುಜಾತಾ ಕಲ್ಲಾಜೆ, ಪಿಡಿಒ
ಮಹೇಶ್,ಗ್ರಾ.ಪಂ. ಸದಸ್ಯ ಗಿರೀಶ್ ಆಚಾರ್ಯ,ಪಂಚಾಯತ್ ಸಿಬಂದಿ
ಪಾಲ್ಗೊಂಡಿದ್ದರು.













