27.7 C
Sullia
Sunday, March 8, 2026

ರಾಜ್ಯದಲ್ಲಿ ಶೇ.71ರಷ್ಟು ಸಮೀಕ್ಷೆ ಪೂರ್ಣ,ಸುಳ್ಯದಲ್ಲಿ ಶೇ 100 ಸಮೀಕ್ಷೆ ಪೂರ್ಣ: ಮಧುಬಂಗಾರಪ್ಪ

ನ್ಯೂಸ್ ನಾಟೌಟ್ :ಶಿಕ್ಷಕರಿಗೆ ಸವಾಲಾಗಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ
ಸಮೀಕ್ಷೆ ರಾಜ್ಯದಲ್ಲಿ ಶೇ.71ರಷ್ಟು ಪೂರ್ಣಗೊಂಡಿದೆ. ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾತನಾಡಿ ಸಮನ್ವಯತೆ,ಮ್ಯಾಪಿಂಗ್ ಸಮಸ್ಯೆಯಿಂದಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸಮೀಕ್ಷೆ ವಿಳಂಬವಾಗಿದೆ. ರಾಜ್ಯದಲ್ಲಿ ಶೇ.71ರಷ್ಟುಗೊಂಡಿದ್ದು, ಮಂಗಳೂರಿನಲ್ಲಿ ಶೇ.48ರಷ್ಟು ಸಮೀಕ್ಷೆಯಷ್ಟೇ
ನಡೆದಿದೆ ಎಂದರು.


Ad Widget
Ad Widget
Ad Widget
Ad Widget
Ad Widget
Ad Widget
Ad Widget


ಸಮೀಕ್ಷೆ ಪೂರ್ಣಕ್ಕೆ ಎರಡು ದಿನವಷ್ಟೇ ಬಾಕಿ ಇದ್ದು, ಮುಂದಿನ
ನಿರ್ಧಾರವನ್ನು ಆಯೋಗ ಸೂಚನೆಯ ಮೇರೆಗೆ ಮುಖ್ಯಮಂತ್ರಿಗಳು
ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.ಶಾಲೆ ನಿಗದಿಯಂತೆ ಬುಧವಾರ ಆರಂಭಗೊಳ್ಳುತ್ತದೆ. ಒಂದು ವೇಳೆ
ಸಮೀಕ್ಷೆ ಪೂರ್ಣಗೊಳ್ಳದಿದ್ದರೆ ಶಿಕ್ಷಕರು ಶಾಲಾ ಆರಂಭಕ್ಕೆ ಮುನ್ನ
ಅಥವಾ ಶಾಲೆ ಬಿಟ್ಟ ಬಳಿಕ ಶನಿವಾರ-ರವಿವಾರ, ರಜಾ ದಿನಗಳಲ್ಲಿ
ಸಮೀಕ್ಷೆ ನಡೆಸುವುದು, ಮುಂತಾದ ವಿಷಯಗಳ ಬಗ್ಗೆ ಆಯೋಗದ
ಸೂಚನೆಯ ಬಳಿಕ ನಿರ್ಧರಿಸುತ್ತೇವೆ ಎಂದು ಹೇಳಿದರು.
ಇಂದಿನ ವ್ಯವಸ್ಥೆಯಲ್ಲಿ ಸಮೀಕ್ಷೆ ಅತೀ ಮುಖ್ಯ, ಪ್ರತಿಯೊಬ್ಬರೂ
ಸ್ವಯಂಪ್ರೇರಿತರಾಗಿ ಸಹಕರಿಸಬೇಕು ಎಂದು ಹೇಳಿದರು

Related Articles

LEAVE A REPLY

Please enter your comment!
Please enter your name here

Latest Articles