ನ್ಯೂಸ್ ನಾಟೌಟ್ : ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲು ಮನೆಯೊಂದಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿದ್ದ ಶಿಕ್ಷಕಿಯ ಮೇಲೆ ನಾಯಿ ದಾಳಿನಡೆಸಿದ ಘಟನೆ ಸುಳ್ಯ ತಾಲೂಕಿನ ಕೊಡಿಯಾಲ ಎಂಬಲ್ಲಿ
ಸಂಭವಿಸಿದೆ.
ಕೊಡಿಯಾಲದ ನಿದ್ಮಾರು ಎಂಬಲ್ಲಿನ ಮನೆಗೆ ಮೂವಪ್ಪೆ ಶಾಲಾ
ಶಿಕ್ಷಕಿಯೋರ್ವರು ಸಮೀಕ್ಷೆಗೆ ತೆರಳಿದ ವೇಳೆ ಮನೆಯ ನಾಯಿ ದಾಳಿ
ನಡೆಸಿದೆ.ಪರಿಣಾಮ ಶಿಕ್ಷಕಿಯ ಉಡುಪು ಹರಿದು ಹೋಗಿದ್ದು, ಈ ವೇಳೆ ಮನೆಯವರು ಬಂದು
ನಾಯಿಯನ್ನು ಹಿಡಿದುಕೊಂಡಿದ್ದಾರೆ. ಭಯಭೀತರಾದ ಶಿಕ್ಷಕಿ ಸಮೀಕ್ಷೆ
ಮುಂದುವರಿಸಲಾಗದೇ ಮನೆಗೆ ಹಿಂದಿರುಗಿದ್ದಾರೆ ಎಂದು
ತಿಳಿದುಬಂದಿದೆ.













