21.6 C
Sullia
Sunday, March 8, 2026

ನವಜಾತ ಗಂಡು ಶಿಶುವಿನೊಳಗೆ ಮತ್ತೊಂದು ಶಿಶು ಪತ್ತೆ: ವೈದ್ಯರಿಗೆ ಸವಾಲಾದ ಪ್ರಕರಣ,ಏನಿದು ಘಟನೆ?

ನ್ಯೂಸ್ ನಾಟೌಟ್ : ನವಜಾತ ಗಂಡು ಶಿಶುವಿನೊಳಗೆ ಮತ್ತೊಂದು ಶಿಶು ಬೆಳೆಯುತ್ತಿರುವ ವಿಚಿತ್ರ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಹುಬ್ಬಳ್ಳಿ (Hubballi) ಕೆಎಂಸಿ ಆಸ್ಪತ್ರೆಯಲ್ಲಿ ಇಂತಹ ಅಪರೂಪದ ಪ್ರಕರಣ ಪತ್ತೆಯಾಗಿದ್ದು ಎಲ್ಲರನ್ನ ಅಚ್ಚರಿಗೆ ಒಳಪಡಿಸಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ತುಂಬು ಗರ್ಭಿಣಿ ಹೆರಿಗೆ ನೋವಿನಿಂದ ಕೆಎಂಸಿಗೆ ಸೆ.23 ರಂದು ದಾಖಲಾಗಿದ್ದರು. ಸುರಕ್ಷಿತವಾಗಿ ಮಹಿಳೆಗೆ ಹೆರಿಗೆ ಸಹ ಆಗಿತ್ತು. ತಾಯಿ ಮತ್ತು ಮಗುವಿನ ಆರೋಗ್ಯ ಸಹ ಚೆನ್ನಾಗಿತ್ತು.ಆದರೆ ನಂತರ ನಡೆದ ಘಟನೆ ವೈದ್ಯರಿಗೂ ಸವಾಲಾಗಿದೆ.

ಮಗುವಿನ ಸ್ಕ್ಯಾನ್ ಮತ್ತು ಅಲ್ಟ್ರಾಸೌಂಡ್ ಮಾಡಿದಾಗ ಹೊಟ್ಟೆಯೊಳಗೆ ಮತ್ತೊಂದು ಮಗುವಿನ ಬೆಳವಣಿಗೆ ಲಕ್ಷಣಗಳು ಕಂಡುಬಂದಿವೆ. ಹುಟ್ಟಿದ ಮಗುವಿನ ಹೊಟ್ಟೆಯಲ್ಲಿ ಬೆನ್ನು ಮೂಳೆ, ತಲೆ ಬುರುಡೆಯ ಬೆಳೆವಣಿಗೆ ಆಗುತ್ತಿರುವುದು ವೈದ್ಯರು ಗುರುತಿಸಿದ್ದಾರೆ.

ಇದು ಬಹಳಷ್ಟು ಅಪರೂಪದ ಪ್ರಕರಣ ಅಸಹಜ ದ್ರವ್ಯ ಸಂಗ್ರಹಣೆ ಇಂತಹ ಬೆಳವಣಿಗೆ ಆಗುತ್ತವೆ. ಅದು ಪೂರ್ಣಗೊಂಡು ಮಗುವಿನ ರೂಪ ಪಡೆದುಕೊಳ್ಳುವುದು ಅಸಾಧ್ಯ. ಹೀಗಾಗಿ ಇನ್ನೂ ಕೆಲವೊಂದು ತಪಾಸಣೆ ಮಾಡಿ, ಪಾಲಕರ ಅನುಮತಿ ಪಡೆದು ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಅಂತ ಕೆಎಂಸಿ ಆಡಳಿತ ಮಂಡಳಿ ಹೇಳಿದೆ.



Related Articles

LEAVE A REPLY

Please enter your comment!
Please enter your name here

Latest Articles