ನ್ಯೂಸ್ ನಾಟೌಟ್: ತೆಂಗಿನ ಮರದಿಂದ ಬಿದ್ದು ಯುವಕನೊಬ್ಬ ಸಾವಿಗೀಡಾದ ಘಟನೆ ಸುಳ್ಯದ ಅಜ್ಜಾವರದ ಕರಿಯಮೂಲೆ ಎಂಬಲ್ಲಿ ಇದೀಗ ನಡೆದಿದೆ. ಸಾವಿಗೀಡಾದವರನ್ನು ಪ್ರಶಾಂತ್ ಎಂದು ಗುರುತಿಸಲಾಗಿದೆ. ಅವರಿಗೆ 18 ವರ್ಷ ವಾಗಿತ್ತು. ಸುಳ್ಯದ ಸರ್ಕಾರಿ ಆಸ್ಪತ್ರೆಗೆ ತರಲಾಗಿತ್ತು. ಆದರೆ ಆತನ ಜೀವ ಉಳಿಸಲು ವೈದ್ಯರು ನಡೆಸಿದ ಪ್ರಯತ್ನ ವಿಫಲವಾಗಿದೆ ಎಂದು ತಿಳಿದು ಬಂದಿದೆ.