ನ್ಯೂಸ್ ನಾಟೌಟ್ : ಹೊಸ ಇಕೋ ಕಾರೊಂದು ಸುಳ್ಯದ ಅಕ್ಷಯ್
ಆರ್ಕೇಡ್‌ನಲ್ಲಿರುವ ಇನ್ ಸ್ಟೈಲ್ ಟೈಲರ್ ಅಂಗಡಿಗೆ ನುಗ್ಗಿದ ಘಟನೆ ಬಗ್ಗೆ ವರದಿಯಾಗಿದೆ.ಕಾರಿಗೆ ಬೈಕ್ ಅಡ್ಡ ಬಂದ ಪರಿಣಾಮ ಈ ಘಟನೆ ಸಂಭವಿಸಿದೆ.
ಕಾರು ಅಂಗಡಿಯೊಳಗೆ ನುಗ್ಗಿರುವ ರಭಸಕ್ಕೆ ಟೈಲರ್ ಮೆಷಿನ್ ಸೇರಿದಂತೆ ಬಟ್ಟೆಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಅದೃಷ್ಟ ವಶಾತ್ ಮಧ್ಯಾಹ್ನ ಊಟದ ಸಮಯದಲ್ಲಿ ಅಂಗಡಿಯಲ್ಲಿ ಯಾರೂ ಇರಲಿಲ್ಲ.ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದರು.













