21.6 C
Sullia
Sunday, March 8, 2026

ಹಾಸನ: ಅನುಮಾನಾಸ್ಪದ ಸ್ಫೋಟ ಸಂಭವಿಸಿ ದಂಪತಿ ಗಂಭೀರ, 11 ತಿಂಗಳ ಮಗು ಸೇಫ್,ಆಗಿದ್ದೇನು?

ನ್ಯೂಸ್ ನಾಟೌಟ್ : ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಳೇ ಆಲೂರು ಗ್ರಾಮದ ಮನೆಯೊಂದರಲ್ಲಿ ಅನುಮಾನಾಸ್ಪದ ಸ್ಫೋಟ ಸಂಭವಿದೆ. ಸ್ಫೋಟದ ರಭಸಕ್ಕೆ ಮನೆ ವಸ್ತುಗಳೆಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದಿವೆ, ಮನೆಯ ಗೋಡೆ ಕೂಡ ಬಿದ್ದು ಹೋಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಈ ಭಯಾನಕ ಸ್ಫೋಟದಲ್ಲಿ ಪತಿ ಸುದರ್ಶನ್ ಆಚಾರ್ ಹಾಗೂ ಪತ್ನಿ ಕಾವ್ಯಗೂ ಗಂಭೀರ ಗಾಯಗಳಾಗಿವೆ. ಸುದರ್ಶನ್​ ಆಚಾರ್​ ಅವರ ಎರಡು ಕಾಲುಗಳಿಗೂ ಭಾರೀ ಪೆಟ್ಟು ಬಿದ್ದಿದೆ. ದಂಪತಿಯನ್ನೂ ಹಾಸನ ಜಿಲ್ಲಾಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಮತ್ತೆ ಮನೆ ಯಲ್ಲಿದ್ದ 11 ತಿಂಗಳು ಹೆಣ್ಣು ಮಗುಗೆ, ರಜಾ ಕಾರಣ ಮಾವನ ಮನೆಗೆ ಬಂದಿದ್ದ ಸುದರ್ಶನ್ ಅಕ್ಕನ ಮಗ ಗೌತಮ್​ಗೆ ಸಣ್ಣ ಪುಟ್ಟ ಗಾಯಗಳಾಗಿ ಯಾವುದೇ ತೊಂದರೆಗಳಾಗಿಲ್ಲ.

ಪತಿ.. ಪತ್ನಿ ಇಬ್ಬರೂ ಸಾವು ಬದುಕಿನ ಮಧ್ಯೆ ಹೋರಾಟದಲ್ಲಿದ್ದಾರೆ. ಸ್ಫೋಟಗೊಂಡ ಮನೆಗೆ ಭೇಟಿ ನೀಡಿದ ಜನರಲ್ಲಿ ಕೆಲವರು ಸಿಲಿಂಡರ್​ ಅಂತಿದ್ರೆ.. ಇನ್ನೂ ಕೆಲವರು ಗೀಸರ್ ಅಂತಿದ್ರು.. ಆದ್ರೆ ಈ ನಿಗೂಡ ಸ್ಫೋಟದ ಸತ್ಯ ಆಲೂರು ಪೊಲೀಸರ ತನಿಖೆ ಬಳಿಕವಷ್ಟೇ ಹೊರ ಬರಬೇಕಿದೆ.

Related Articles

LEAVE A REPLY

Please enter your comment!
Please enter your name here

Latest Articles