ನ್ಯೂಸ್ ನಾಟೌಟ್ : ಖ್ಯಾತ ನಟಿ ಅನುಷ್ಕಾ ಶೆಟ್ಟಿ ತಮ್ಮ ಅದ್ಭುತ ನಟನೆಯಿಂದ ಪ್ರೇಕ್ಷಕರನ್ನು ರಂಜಿಸುತ್ತಲೇ ಬಂದಿದ್ದಾರೆ. ಒಂದು ಕಾಲದಲ್ಲಿ ಅನುಷ್ಕಾ ಶೆಟ್ಟಿ ಸ್ಟಾರ್ ನಾಯಕಿಯಾಗಿದ್ದರು. ಆದರೆ ಬಾಹುಬಲಿ ನಂತರ ಅವಕಾಶಗಳು ಕಡಿಮೆಯಾದಾಗ ಒಂದು ಪುಟ್ಟ ಬ್ರೇಕ್ ಪಡೆದರು.
ಇದರ ಜತೆಗೆ ಆಗಾಗ ಅನುಷ್ಕಾ ಶೆಟ್ಟಿ ಅವರ ಮದುವೆಯ ಬಗ್ಗೆ ವದಂತಿಗಳು ಶುರುವಾಗುತ್ತವೆ. ಆದರೆ ಅವುಗಳಲ್ಲಿ ಯಾವುದೂ ನಿಜವಿರುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅನುಷ್ಕಾ ಪ್ರಭಾಸ್ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಲೇ ಇರುತ್ತದೆ. ಆದರೆ ಇಬ್ಬರೂ ಇದು ಕೇವಲ ವದಂತಿ ಎಂದು ಹೇಳುತ್ತಿದ್ದಾರೆ. ಅಂತಹ ಸಮಯದಲ್ಲಿ ಒಂದು ಅಚ್ಚರಿಯ ಸುದ್ದಿ ಮುನ್ನೆಲೆಗೆ ಬಂದಿದೆ.
ಅನುಷ್ಕಾ ಶೆಟ್ಟಿ ಅವರ ಜಾತಕದಲ್ಲಿ ಕುಜ ದೋಷವಿದೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿಯೇ ಅವರ ಮದುವೆ ವಿಳಂಬವಾಗುತ್ತಿದೆ ಅಂತೆ. ಇದಲ್ಲದೆ ಪ್ರಭಾಸ್ ಅವರ ತಾಯಿ ಅನುಷ್ಕಾ ಅವರ ಜೊತೆ ಮದುವೆಯಾಗಲು ಒಪ್ಪಿಲ್ಲ ಎಂಬ ವದಂತಿಗಳು ಕೆಲವು ದಿನಗಳ ಹಿಂದೆ ಮಾಧ್ಯಮಗಳಲ್ಲಿ ಹರಡಿದ್ದವು.
ಅಭಿಮಾನಿಗಳು ಅವರು ಈ ಕುಜ ದೋಷವನ್ನು ನಿವಾರಿಸಿ, ಬೇಗ ಮದುವೆಯಾಗಿ ವೈವಾಹಿಕ ಜೀವನಕ್ಕೆ ಪ್ರವೇಶಿಸಲಿ ಹಾರೈಸುತ್ತಿದ್ದಾರೆ. ಆದರೆ ಈ ಬಗ್ಗೆ ಅನುಷ್ಕಾ ಶೆಟ್ಟಿ ಆಗಲಿ, ಅವರ ಮಿತ್ರರು, ಕುಟುಂಬದವರಾಗಲಿ ಸ್ಪಷ್ಟನೆ ನೀಡಿಲ್ಲ.













