ನ್ಯೂಸ್ ನಾಟೌಟ್: ಕೇರಳದಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ 25 ಕೋಟಿ ರೂ. ಪ್ರಥಮ ಬಹುಮಾನ ಸೇರಿದಂತೆ ಲಕ್ಷಾಂತರ ರೂ. ನಗದು ಬಹುಮಾನಗಳ ಡ್ರಾ ಹೊಂದಿರುವ ತಿರುಓಣಂ ಕೇರಳ ಲಾಟರಿ ಡ್ರಾ ದಿನಾಂಕ ಮುಂದೂಡಿಕೆಯಾಗಿದೆ. ಕೇರಳ ರಾಜ್ಯ ಲಾಟರಿ ವಿಭಾಗ ಅಕ್ಟೋಬರ್ 4ಕ್ಕೆ ಮುಂದೂಡಿಕೆ ಮಾಡಿರುವುದನ್ನು ಖಚಿತಪಡಿಸಿದೆ. ಭಾರೀ ಮಳೆಯಿಂದಾಗಿ ಜನರು ಹೊರಗೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನದಿಂದ ಟಿಕೆಟ್ ಗಳು ಮಾರಾಟಗೊಂಡಿಲ್ಲ. ಅಲ್ಲದೆ ಜಿಎಸ್ ಟಿ ಸಂಬಂಧಿತ ಸಮಸ್ಯೆಗಳು ಕೂಡ ಕಂಡು ಬಂದಿರುವ ಹಿನ್ನೆಲೆಯಲ್ಲಿ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅಕ್ಟೋಬರ್ 4ರ ತನಕ ಟಿಕೆಟ್ ಗಳನ್ನು ಖರೀದಿ ಮಾಡಲು ಅವಕಾಶ ಇದೆ ಎಂದು ತಿಳಿದು ಬಂದಿದೆ.













