ನ್ಯೂಸ್ ನಾಟೌಟ್ :ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ದಲ್ಲಿ ಎನ್. ಎಸ್. ಎಸ್ ದಿನಾಚರಣೆಯ ಪ್ರಯುಕ್ತ ಎಂ ಎನ್ ಎಸ್ ಎಸ್ ನ ಧ್ವಜಾರೋಹಣವನ್ನು ನಡೆಸಲಾಯಿತು.
ಧ್ವಜಾರೋಹಣವನ್ನು ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ನೆರವೇರಿಸಿದರು. ಕಾಲೇಜಿನ ಎಲ್ಲಾ ಬೋಧಕ ವೃಂದದವರು ಹಾಗೂ ಎನ್.ಎಸ್. ಎಸ್ ಸ್ವಯಂಸೇವಕರು ಉಪಸ್ಥಿತರಿದ್ದರು. ದ್ವಿತೀಯ ಬಿ ಎಸ್ ಸಿ ಯ ವಿದ್ಯಾರ್ಥಿನಿ ಕು. ಅರ್ಪಿತಾ ಕಾರ್ಯಕ್ರಮ ನಿರೂಪಿಸಿದರು. ಎನ್.ಎಸ್. ಎಸ್ ಸ್ವಯಂಸೇವಕರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.













