ನ್ಯೂಸ್ ನಾಟೌಟ್: ಸುಳ್ಯ ಸಮೀಪದ ಗೂನಡ್ಕದ ಬಳಿಯ ದೊಡ್ಡಡ್ಕದಲ್ಲಿ ಜಿಂಕೆಯೊಂದು ಅಪಘಾತಕ್ಕೀಡಾಗಿ ಇಂದು ಬೆಳಗ್ಗೆ ಸಾವಿಗೀಡಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಈ ವಿಚಾರವನ್ನು ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಪರಿಚಿತ ವಾಹನದಿಂದ ಅಪಘಾತಕ್ಕೊಳಗಾದ ಜಿಂಕೆಯನ್ನು ಸುಳ್ಯಕ್ಕೆ ಸಾಗಿಸಲಾಗಿದೆ ಎನ್ನಲಾಗಿದೆ.