ಪ್ರಧಾನಿ ಮೋದಿ ಹಿಂದೆ ಮಹಿಳಾ ಎಸ್‌.ಪಿ.ಜಿ ಕಮಾಂಡೋ ಇರುವ ಫೋಟೋ ವೈರಲ್..? ಇಲ್ಲಿದೆ ಸಂಪೂರ್ಣ ಮಾಹಿತಿ

ನ್ಯೂಸ್ ನಾಟೌಟ್: ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯ ಹಿಂದೆ ಮಹಿಳಾ ಎಸ್‌.ಪಿ.ಜಿ (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್) ಕಮಾಂಡೋ ನಡೆದುಕೊಂಡು ಹೋಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಂಸದೆ ಕಂಗನಾ ರಣಾವತ್, ಕರ್ನಾಟಕದ ಬಿಜೆಪಿ ನಾಯಕ ಕೆ. ಸುಧಾಕರ್ ಸೇರಿದಂತೆ ಹಲವು ನಾಯಕರು ಈ ಫೋಟೋವನ್ನು ತಮ್ಮ ಪೇಜಿನಲ್ಲಿ ಹಂಚಿಕೊಂಡಿದ್ದು, ಇದು ನಿಜವಾದ ಮಹಿಳಾ ಸಬಲೀಕರಣ ಎಂದು ಪೋಸ್ಟ್ ಮಾಡಿದ್ದಾರೆ. ಮೂಲಗಳ ಪ್ರಕಾರ, ಮಹಿಳಾ ಜಿಪಿಜಿ ಕಮಾಂಡೋವನ್ನು ಗಣ್ಯರೊಂದಿಗೆ ನೋಡುವುದು ಇದೇ ಮೊದಲಲ್ಲ. 2015ರಲ್ಲಿ ಎಸ್‌.ಪಿ.ಜಿಯಲ್ಲಿ ಮಹಿಳೆಯರಿಗೆ ಮೊದಲು ಅವಕಾಶ ನೀಡಲಾಯಿತು. ಆರಂಭಿಕ ಅವಧಿಯಲ್ಲಿ, ಸುಧಾರಿತ ನಿಯೋಜನೆಗಾಗಿ ಮಹಿಳೆಯರನ್ನು ಎಸ್‌.ಪಿ.ಜಿಯಲ್ಲಿ ಇರಿಸಲಾಗಿತ್ತು. ಸಂಸತ್ತಿನಲ್ಲೂ ಎಸ್‌ಪಿಜಿ ಮಹಿಳಾ ಕಮಾಂಡೋಗಳನ್ನು ನಿಯೋಜಿಸಲಾಗಿದೆ. ಬಿಜೆಪಿ ಸಂಸದ ಡಾ. ಕೆ. ಸುಧಾಕರ್ ಈ ಬಗ್ಗೆ ಎಕ್ಸ್ ​ನಲ್ಲಿ ಪೋಸ್ಟ್ ಮಾಡಿದ್ದು, “ಪ್ರಧಾನಿ ಎಸ್‌ಪಿಜಿಯಲ್ಲಿ ಮಹಿಳಾ ಕಮಾಂಡೋ! ಅಗ್ನಿವೀರ್‌ ನಿಂದ ಫೈಟರ್ ಪೈಲಟ್‌ ಗಳವರೆಗೆ, ಯುದ್ಧ ಸ್ಥಾನದಿಂದ ಪ್ರಧಾನ ಮಂತ್ರಿ ಎಸ್‌.ಪಿ.ಜಿಯಲ್ಲಿ ಕಮಾಂಡೋವರೆಗೆ, ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಮಹಿಳೆಯರ ಮುಂಚೂಣಿಯಿಂದ ಮಹಿಳೆಯರಿಗೆ ಹೆಚ್ಚಿನ ಶಕ್ತಿ ಸಿಕ್ಕಿದೆ. ಇದಕ್ಕಾಗಿ ಧನ್ಯವಾದಗಳು ಪ್ರಧಾನಿ ಮೋದಿಜೀ” ಎಂದು ಪೋಸ್ಟ್ ಮಾಡಿದ್ದಾರೆ. Click