ಭಕ್ತನಂತೆ ಬಂದು ಭಗವಂತನನ್ನೇ ಕದ್ದ ಕಳ್ಳ..! ವಿಗ್ರಹ ಕಳವಿನ ದೃಶ್ಯ ಸಿಸಿಟಿವಿಯಲ್ಲಿ ಸೆರೆ..!

ನ್ಯೂಸ್ ನಾಟೌಟ್ : ಸಾಯಿಬಾಬಾ ದೇವಸ್ಥಾನಕ್ಕೆ ಕಳ್ಳನೊಬ್ಬ ಭಕ್ತನಂತೆ ಪ್ರವೇಶಿಸಿ ಅಲ್ಲಿದ್ದ ಪೂಜೆಗೆ ಇಟ್ಟಿದ್ದ ಬೆಲೆಬಾಳುವ ಸಾಯಿಬಾಬಾ ವಿಗ್ರಹ, ಬೆಳ್ಳಿಯ ಬಟ್ಟಲು, ಗಂಟೆಯನ್ನು ಕದ್ದೊಯ್ದ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಉರವಕೊಂಡ ಪಟ್ಟಣದಲ್ಲಿರುವ ದೇಗುಲದಲ್ಲಿ ನಡೆದಿದೆ. ಅವುಗಳನ್ನು ಬ್ಯಾಗ್ ​ನಲ್ಲಿ ತುಂಬಿಕೊಂಡು ಹೋಗಿದ್ದಾನೆ. ಈ ದೃಶ್ಯ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿರುವುದರಿಂದ ಆ ಕಳ್ಳ ಸಿಕ್ಕಿಬಿದ್ದಿದ್ದಾನೆ. ದೇವಸ್ಥಾನದಲ್ಲಿ ಸ್ವಲ್ಪ ಹೊತ್ತು ಸಾಯಿ ಬಾಬಾರ ಮುಂದೆ ಕುಳಿತಿದ್ದ ಆತ ಭಕ್ತರು ಇಲ್ಲದ ಸಮಯಕ್ಕಾಗಿ ಕಾಯುತ್ತಿದ್ದ. ಯಾರೂ ಇಲ್ಲದಿದ್ದಾಗ ದೇವರೆದುರು ಕುಳಿತು ಸಾಯಿಬಾಬಾರ ಪಂಚಲೋಹದ ವಿಗ್ರಹ, ಬೆಳ್ಳಿಯ ಬಟ್ಟಲು ಹಾಗೂ ಗಂಟೆಯನ್ನು ಕದ್ದಿದ್ದಾನೆ. ಸಾಯಿಬಾಬಾ ದೇವಸ್ಥಾನಕ್ಕೆ ಕಳ್ಳನೊಬ್ಬ ಭಕ್ತನಂತೆ ಪ್ರವೇಶಿಸಿ ಅಲ್ಲಿದ್ದ ಪೂಜೆಗೆ ಇಟ್ಟಿದ್ದ ಬೆಲೆಬಾಳುವ ಸಾಯಿಬಾಬಾ ವಿಗ್ರಹ, ಬೆಳ್ಳಿಯ ಬಟ್ಟಲು, ಗಂಟೆಯನ್ನು ಕದ್ದೊಯ್ದ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಉರವಕೊಂಡ ಪಟ್ಟಣದಲ್ಲಿರುವ ದೇಗುಲದಲ್ಲಿ ನಡೆದಿದೆ.#saibaba pic.twitter.com/LkIjjoaKIV — News Not Out (@News_Not_Out) November 21, 2024 ದೇವಸ್ಥಾನದಲ್ಲಿ ಕಳ್ಳತನವಾಗಿರುವ ಬಗ್ಗೆ ಅರ್ಚಕರಿಗೆ ತಿಳಿದು ದೇವಸ್ಥಾನದ ಟ್ರಸ್ಟಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ದೇವಸ್ಥಾನದ ಧರ್ಮಾಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳನಿಗಾಗಿ ಬಲೆ ಬೀಸಿದ್ದಾರೆ. Click