ನ್ಯೂಸ್ ನಾಟೌಟ್: ತಾಯಿ ಕೆಲಸಕ್ಕೆ ಹೋದಾಗ ತಾತನೇ ತನ್ನ 6 ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ವಿಚಾರ ಬಾಲಕಿ ಮನೆಯಲ್ಲಿ ಗೊತ್ತಾಗುತ್ತಿದ್ದಂತೆಯೇ ಯಾರಿಗೂ ಹೇಳದಂತೆ ಬಾಲಕಿ ತಾಯಿಗೆ(ಸೊಸೆ) ಬಂಗಾರ, ಮನೆ ಆಮಿಷವೊಡ್ಡಿದ್ದಾನೆ. ಆದ್ರೆ, ಅತ್ಯಾಚಾರಕ್ಕೆ ಒಳಗಾದ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಮೆನೆಯಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಆರೋಪಿ ಪರಾರಿಯಾಗಲು ಬಾಲಕಿ ತಂದೆಯೇ ಸಹಕರಿಸಿದ್ದಾನೆ ಎನ್ನಲಾಗಿದ್ದು, ಈ ಘಟನೆ ನಂತರ ಮೊಮ್ಮಗಳ ತಾಯಿ ಮತ್ತು ತಂದೆಗೆ ನಿನ್ನ ಮಗಳ ಹೆಸರಿಗೆ ಮನೆ ಬರೆದು ಕೊಡುತ್ತೇನೆ ಪೊಲೀಸರಿಗೆ ದೂರು ಕೊಡಬೇಡಿ ಎಂದು ಆಮಿಷವೊಡಿದ್ದಾನೆ. ಈ ಬಗ್ಗೆ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ಇದಾದ ನಂತರ ಸುಮ್ಮನಿದ್ದ ಬಾಲಕಿಯ ತಾಯಿ ನಾನು ಕೆಲಸಕ್ಕೆ ಹೊರಡುತ್ತೇನೆ ಎಂದು ಸಬೂಬು ಹೇಳಿ ಮನೆಯಿಂದ ಆಚೆಗೆ ಬಂದು ಅಕ್ಕಪಕ್ಕದವರ ಸಹಾಯ ಪಡೆದು ಮಗಳನ್ನು ಆಸ್ಪತ್ರೆಗೆ ಸೇರಿಸಿದ್ದಾಳೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ನಂತರ ಅಲ್ಲಿಗೆ ಬಂದ ಪೊಲೀಸರು ತಾಯಿಗೆ ದೂರು ದಾಖಲಿಸುವಂತೆ ಸೂಚನೆ ನೀಡಿದ್ದಾರೆ. ಬಳಿಕ ಪೊಲೀಸರು ಮತ್ತು ವೈದ್ಯರ ಒತ್ತಾಯಕ್ಕೆ ದೂರು ದಾಖಲಾಗಿದೆ ಎಂದು ವರದಿ ತಿಳಿಸಿದೆ.
Click 👇