ನ್ಯೂಸ್ ನಾಟೌಟ್ : ಕೆರೆಗೆ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ, ಫೇಲ್ ಆದ ವಿಚಾರ ಪೋಷಕರಿಗೆ ತಿಳಿಯುತ್ತೆಂದು ಹೆದರಿದ ವಿದ್ಯಾರ್ಥಿ ಜಿಗಣಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಆನೆಕಲ್ ನಲ್ಲಿ ನಡೆದಿದೆ. ಹೇಮಲತಾ ಪಾಂಡೆ, ವಿಜಯ್ ಶಂಕರ್ ಪಾಂಡೆ ದಂಪತಿ ಪುತ್ರ ಅಮೃತೇಶ್ ಪಾಂಡೆ ಮೂಲತಃ ಬಿಹಾರ ಮೂಲದ ಕುಟುಂಬದವರು.
ಕಳೆದ ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಜಿಗಣಿಗೆ ಬಂದು ನೆಲೆಸಿದ್ದರು. ಮಗನಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕೆಂದು ಕನಸು ಕಂಡಿದ್ದ ಪೋಷಕರು, ಅದರಂತೆಯೇ ಮೈಸೂರು ರಸ್ತೆಯ ಆರ್.ವಿ ಕಾಲೇಜಿಗೆ ಮಗನನ್ನು ಸೇರಿಸಿದ್ದರು ಎನ್ನಲಾಗಿದೆ. ಅಮೃತೇಶ್ ಪಾಂಡೆ (21) ಆತ್ಮಹತ್ಯೆ ಮಾಡಿಕೊಂಡವನು ಎಂದು ಗುರುತಿಸಲಾಗಿದೆ. ಆರ್.ವಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಅಮೃತೇಶ್, ಹಾಸ್ಟೆಲ್ನಲ್ಲಿ ಇದ್ದುಕೊಂಡು ಕಾಲೇಜಿಗೆ ಹೋಗಿ ಬರುತ್ತಿದ್ದ. ಮೂರನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಅಮೃತೇಶ್, ಎರಡು ವಿಷಯದಲ್ಲಿ ಫೇಲ್ ಆಗಿದ್ದ. ಸರಿಯಾಗಿ ಕಾಲೇಜಿಗೂ ಹೋಗುತ್ತಿರಲಿಲ್ಲ ಎನ್ನಲಾಗಿದೆ. ಲೋಕಸಭೆ ಚುನಾವಣಾಗೆ ಮತ ಹಾಕಲು ಜಿಗಣಿಗೆ ಬಂದಿದ್ದ ಅಮೃತೇಶ್, ಫೇಲ್ ಆಗಿರುವ ವಿಚಾರ ತಂದೆಗೆ ತಿಳಿಯುತ್ತೆ ಎಂದು ಹೆದರಿಬಿಟ್ಟಿದ್ದ. ಕಾಲೇಜಿನವರು ಫೋನ್ ಮಾಡುತ್ತಾರೆ ಎಂದು ತಂದೆ ಫೋನ್ನಲ್ಲಿ ನಂಬರ್ಗಳನ್ನು ಬ್ಲಾಕ್ ಮಾಡಿದ್ದ. ಆದರೆ ಇತ್ತ ಅಮೃತೇಶ್ ತಂದೆ ವಿಜಯ್ ಶಂಕರ್ ಆರನೇ ಸೆಮಿಸ್ಟರ್ಗೆ ಆಡ್ಮಿಷನ್ ಮಾಡಿ ಕಾಲೇಜಿಗೆ ಬಿಟ್ಟು ಬರುತ್ತೇನೆ ಎಂದು ಹೇಳಿದ್ದಾರೆ. ತಂದೆಯ ಜತೆ ಕಾಲೇಜಿಗೆ ಹೋದರೆ ಫೇಲ್ ಆದ ವಿಚಾರ ತಿಳಿಯುತ್ತೆ. ಸರಿಯಾಗಿ ಕಾಲೇಜಿಗೂ ಹೋಗದೇ ಇರುವುದು ತಿಳಿದು ಬಿಡುತ್ತೆ ಎಂದು ಅಮೃತೇಶ್ ಭಯಗೊಂಡಿದ್ದ. ಹೀಗಾಗಿ ಮೇ 10ರಂದು ಮನೆಯಿಂದ ಹೊರಟ ಅಮೃತೇಶ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇತ್ತ ಆತನಿಗಾಗಿ ಅಮೃತೇಶ್ ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಆದರೆ ನಿನ್ನೆ ಜಿಗಣಿ ಕೆರೆಯಲ್ಲಿ ಅಮೃತೇಶ್ ಮೃತದೇಹವು ತೇಲಿಕೊಂಡು ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.
Click 👇