ನ್ಯೂಸ್ ನಾಟೌಟ್: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಪ್ರೀತಿ, ಪ್ರೇಮದ ಹಿನ್ನೆಲೆಯನ್ನು ಹೊಂದಿಲ್ಲ. ಇದು ಪಕ್ಕಾ ಲವ್ ಜಿಹಾದ್. ಜನಸಂಖ್ಯೆ ಹೆಚ್ಚಿಗೆ ಮಾಡುವ ಲವ್ ಜಿಹಾದ್ ಇದಾಗಿದೆ. ಇದಕ್ಕೆ ಒಪ್ಪದಿದ್ದಕ್ಕೆ ನೇಹಾಳನ್ನು ಕೊಲೆ ಮಾಡಲಾಗಿದೆ. ಹಿಂದೂ ಹುಡುಗಿಯರು ಎಚ್ಚರಿಕೆಯಿಂದ ಇರಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಈಗಾಗಲೇ ಕೇರಳದಲ್ಲಿ ಕಳೆದ 2 ವರ್ಷದಲ್ಲಿ 3 ಸಾವಿರ ಹಿಂದೂ ಯುವತಿಯರ ಮತಾಂತರ ಮಾಡಲಾಗಿದೆ. ಪ್ರೀತಿ ಬೇಡ ಎಂದ್ಮೇಲೆ ನೇಹಾ ಹತ್ಯೆ ಮಾಡಲಾಗಿದೆ. ಅದು ಕೂಡ ನೇಹಾಳನ್ನು 14 ಬಾರಿ ಚುಚ್ಚಿ ಹತ್ಯೆ ಮಾಡಲಾಗಿದೆ. ಇದುವೇ ಇಸ್ಲಾಂ ಪ್ರಕ್ರಿಯೆ ಆಗಿದೆ. ಇದರ ಹಿಂದೆ ದೊಡ್ಡ ಜಾಲ ಇದೆ ಎಂದು ಆರೋಪಿಸಿದರು. ಧಾರವಾಡದ ಅಂಜುಮನ್ ಇಸ್ಲಾಂ ಸಂಸ್ಥೆಯು ಅರ್ಧ ದಿನ ಹೋರಾಟ ಮಾಡುವ ನಾಟಕ ಮಾಡಿದೆ. ಆದರೆ, ಇದು ಮೊಸಳೆ ಕಣ್ಣೀರು ಆಗಿದೆ. ಮದರಸಾಗಳಲ್ಲಿ ಇಸ್ಲಾಂನ ಭಾಗವಾಗಿ ಲವ್ ಜಿಹಾದ್ ಕಲಿಸಲಾಗುತ್ತಿದ್ದು, ಇದು ನಿಲ್ಲಬೇಕು.
ಆರೋಪಿ ಫಯಾಜ್ ಕುಟುಂಬಸ್ಥರಿಗೆ ಪತ್ವಾ ಹೊರಡಿಸಬೇಕು. ಫಯಾಜ್ ಮನೆಯನ್ನು ಧ್ವಂಸ ಮಾಡಬೇಕು. ಫಯಾಜ್ ಮನೆಯನ್ನು ಸುಟ್ಟು ಹಾಕಬೇಕು. ಅದು ಆಗೋದಿಲ್ವಾ ಕೂಡಲೇ ಅವರ ಕುಟುಂಬದ ವಿರುದ್ಧ ಪತ್ವಾ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ. ಬೆಂಗಳೂರಿನ ಡಿ.ಜೆ. ಹಳ್ಳಿ, ಕೆ.ಜೆ. ಹಳ್ಳಿ ಹಾಗೂ ಹುಬ್ಬಳ್ಳಿ ಗಲಾಟೆ ಜೊತೆಗೆ ಹಿಂದೂ ಕಾರ್ಯಕರ್ತ ಹರ್ಷ ಕೊಲೆಯಾದಾಗ ಅಂಜುಮನ್ ಸಂಸ್ಥೆ ಯಾಕೆ ಮಾತನಾಡಲಿಲ್ಲ. ಎಲ್ಲಿಯವರೆಗೆ ಕಾಂಗ್ರೆಸ್ ಇರುತ್ತದೆಯೋ, ಅಲ್ಲಿಯವರೆಗೂ ಇಸ್ಲಾಂ ಎದ್ದು ಕುಣಿಯುತ್ತದೆ. ಇದಕ್ಕೆ ಕಾಂಗ್ರೆಸ್ ಪ್ರೇರಣೆ, ಕಾಂಗ್ರೆಸ್ ಖುರ್ಚಿ ದಾಹಕ್ಕಾಗಿ ಹಿಂದೂಗಳ ಹತ್ಯೆ ಆಗ್ತಾ ಇದಾವೆ. ಕಾಂಗ್ರೆಸ್ನವರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕಾಂಗ್ರೆಸ್ನವರು ತೊಳೆಯಲಾರದ ಪಾಪ ಮಾಡಿದ್ದಾರೆ ಎಂದು ಟೀಕೆ ಮಾಡಿದ್ದಾರೆ.