ನ್ಯೂಸ್ ನಾಟೌಟ್: ಮೈತ್ರಿ ಒಕ್ಕಲಿಗ ನಾಯಕರ ಶಕ್ತಿಪ್ರದರ್ಶನಕ್ಕೂ ಮುನ್ನ ಇಂದು(ಎ.10) ಜೆಡಿಎಸ್ ಮತ್ತು ಬಿಜೆಪಿ ನಾಯಕರು ಆದಿಚುಂಚನಗಿರಿ ಮಠಕ್ಕೆ ತೆರಳಿ ನಿರ್ಮಲಾನಂದ ಶ್ರೀಗಳ ಆಶಿರ್ವಾದ ಪಡೆದಿದ್ದಾರೆ. ಹೆಚ್.ಡಿ ಕುಮಾರಸ್ವಾಮಿ, ಆರ್.ಅಶೋಕ್, ಸಿ.ಟಿ ರವಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಅಶ್ವಥ್ ನಾರಾಯಣ್, ಪಿಸಿ ಮೋಹನ್, ಯದುವೀರ್ ಒಡೆಯರ್, ನಿಖಿಲ್, ಬೆಂಗಳೂರು ಗ್ರಾ, ಅಭ್ಯರ್ಥಿ ಸಿಎನ್ ಮಂಜುನಾಥ್ ಸೇರಿದಂತೆ ಹಲವರು ಮಠಕ್ಕೆ ಭೇಟಿ ಕೊಟ್ಟು ನಿರ್ಮಲಾನಂದ ಶ್ರೀಗಳ (Nirmalananda Swamiji) ಆಶೀರ್ವಾದ ಪಡೆದಿದ್ದಾರೆ.
ಆರ್.ಅಶೋಕ್ (R. Ashok) ಮಾತನಾಡಿ, ಇಂದು ಶ್ರೀಗಳ ಆರ್ಶೀವಾದ ಪಡೆಯುವುದಕ್ಕೆ ಮೈತ್ರಿ ನಾಯಕರು ಬಂದಿದ್ದೇವೆ. ಶ್ರೀಗಳ ಆರ್ಶೀವಾದ, ಅವರ ಬೆಂಬಲದೊಂದಿಗೆ ಚುನಾವಣೆ ಪ್ರಚಾರಕ್ಕೆ ಹೋಗ್ತೀವಿ ಎಂದರು. ಇದೇ ವೇಳೆ ಬಿಡದಿ ತೋಟದಲ್ಲಿ ಹೊಸತೊಡಕು ವಿಚಾರಕ್ಕೆ ಪ್ರತಿಕ್ರಿಯಿಸಿ, ಇನ್ನು ಹೋಗುವುದು ನಿರ್ಧಾರ ಆಗಿಲ್ಲ. ಒಂದೊಳ್ಳೆ ಸಂದೇಶ ಹೋಗಬೇಕಿದೆ. ಎಲ್ಲಾ ಸಮುದಾಯದವರು, ಬಿಜೆಪಿಗೆ, ಮೋದಿಗೆ ಮತ ಹಾಕಬೇಕೆಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಇಲ್ಲಿ ಆರ್ಶೀವಾದ ಪಡೆದರೆ ಇನ್ನಷ್ಟು ಬೆಂಬಲ ಸಿಗುತ್ತದೆ ಎಂದು ಹೇಳಿದರು. ನಿರ್ಮಲಾನಂದ ಶ್ರೀಗಳ ಆಶಿರ್ವಾದ ಮೈತ್ರಿ ಅಭ್ಯರ್ಥಿಗಳು ಪಡೆದಿದ್ದೇವೆ.
ಪ್ರಜಾಪ್ರಭುತ್ವ ಯುದ್ಧದಲ್ಲಿ ಗುರು ರಕ್ಷೆ ಬೇಕು ಎಂದು ಸಿ.ಟಿ ರವಿ ಹೇಳಿದ್ದಾರೆ. ಭಾರತ ವಿಶ್ವಗುರು ಆಗಬೇಕು ಮೋದಿ ಪ್ರಧಾನಿಯಾಗಬೇಕು. ಹಾಗಾಗಿ ಆಶೀರ್ವಾದ ಪಡೆಯಲು ಬಂದಿದ್ದೇವೆ. ಸನಾತನ ಧರ್ಮ ವಿರೋಧಿಯಾಗಿ ವರ್ತಿಸುತ್ತಿದ್ದಾರೆ. ಧರ್ಮವನ್ನ ಡೆಂಗ್ಯೂ ಮಲೇರಿಯಾಗೆ ಹೋಲಿಕೆ ಮಾಡಿದ್ದರು. ಮಠ ದೇವಾಸ್ಥಾನ ಸನಾತನ ಧರ್ಮಗಳ ಪ್ರತೀಕ. ಮಠ ದೇವಸ್ಥಾನ ನಾಶವಾಗಬೇಕು ಅನ್ನೋದು ಅವರ ಉದ್ದೇಶ. ಸನಾತನ ಧರ್ಮ ಉಳಿವಿಗಾಗಿ ಮತ್ತೆ ಮೋದಿಯವರು ಬೇಕು ಎಂದು ಸಿ.ಟಿ ರವಿ ಹೇಳಿದ್ದಾರೆ.