ನ್ಯೂಸ್ ನಾಟೌಟ್: ಮದುವೆ ಮನೆಯಲ್ಲಿ ಸಂಭ್ರಮ, ಖುಷಿ ತುಂಬಿರುತ್ತದೆ. ಮದುವೆಗೂ ಮೊದಲು ಮೆಹಂದಿ, ಸಂಗೀತ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಹೀಗೆ ಉತ್ತರ ಭಾರತದ ಮೀರತ್ ನಲ್ಲಿ (ಏ.29) ಮದುವೆಯ ಪ್ರಮುಖವಾಗಿರುವ ಹಳದಿ ಕಾರ್ಯಕ್ರಮದಲ್ಲಿ ಇಡೀ ಕುಟುಂಬಸ್ಥರು, ಆಪ್ತರು ಮ್ಯೂಸಿಕ್ ಹಾಕಿ ಡ್ಯಾನ್ಸ್ ಮಾಡಿದ್ದಾರೆ.
ಈ ವೇಳೆ ಅಕ್ಕನ ಮದುವೆಯ ಹಳದಿ ಸೆರೆಮನಿಯಲ್ಲಿ 18 ವರ್ಷದ ತಂಗಿ ಕೂಡ ಡ್ಯಾನ್ಸ್ ಮಾಡಿದ್ದಾಳೆ. ಆದರೆ ಡ್ಯಾನ್ಸ್ ಮಾಡುತ್ತಿದ್ದಂತೆ ಹೃದಯಾಘಾತಕ್ಕೆ ತುತ್ತಾದ ಯುವತಿ ಕುಸಿದು ಬಿದ್ದು ಮೃತಪಟ್ಟಿದ್ದಾಳೆ ಎಂದು ವರದಿ ತಿಳಿಸಿದೆ. ಮೃತ ಯುವತಿಯನ್ನು ರಿಮ್ಶಾ ಎಂದು ಗುರುತಿಸಲಾಗಿದೆ. ರಿಮ್ಶಾಳ ಅಕ್ಕನ ಮದುವೆಗೂ ಮೊದಲು ಮನೆಯಲ್ಲಿ ಹಲ್ಡಿ ಸೆರಮನಿ ಆಯೋಜಿಸಲಾಗಿದೆ. ಎಲ್ಲಾ ಕುಟುಂಬಸ್ಥರು, ಆಪ್ತರು, ಸ್ಥಳೀಯರು ಆಗಮಿಸಿದ್ದಾರೆ. ಹಳದಿ ಶಾಸ್ತ್ರಗಳ ಜೊತೆಗೆ ಮ್ಯೂಸಿಕ್ ಹಾಗೂ ಡ್ಯಾನ್ಸ್ ಕೂಡ ನಡೆಯುತ್ತಿತ್ತು. ಒಂದೆಡೆ ಅಕ್ಕನಿಗೆ ಹಳದಿ ಹಚ್ಚಿ, ನೀರು ಎರಚಿ ಸಂಭ್ರಮ ಪಡುತ್ತಿದ್ದರೆ, ಮತ್ತೊಂದೆಡೆ ಮ್ಯೂಸಿಕ್ ಹಾಗೂ ಡ್ಯಾನ್ಸ್ ಜೋರಾಗಿತ್ತು. ಕುಟುಂಬಸ್ಥರು, ಆಪ್ತರು ಎಲ್ಲರೂ ಡ್ಯಾನ್ಸ್ನಲ್ಲಿ ಮಗ್ನರಾಗಿದ್ದರು. ಅಕ್ಕನ ಮದುವೆ ಕಾರಣ ತಂಗಿ ವಿಶೇಷ ಅಲಂಕಾರದಲ್ಲಿ ಕುಟುಂಬಸ್ಥರೊಂದಿಗೆ ಹೆಜ್ಜೆ ಹಾಕಿದ್ದಳು.
ಮ್ಯೂಸಿಕ್ಗೆ ತಕ್ಕಂತೆ ಡ್ಯಾನ್ಸ್ ಮಾಡಿದ್ದಾಳೆ. ಇತ್ತ ಕುಟುಂಬ್ಥರು ರಿಮ್ಶಾಳನ್ನು ಹುರಿದುಂಬಿಸಿದ್ದಾರೆ. ಎಲ್ಲರ ಜೊತೆ ಡ್ಯಾನ್ಸ್ ಮಾಡುತ್ತಿದ್ದ ರಿಮ್ಶಾಗೆ ಹೃದಯಾಘಾತವಾಗಿದೆ. ಡ್ಯಾನ್ಸ್ ಮಾಡುತ್ತಿದ್ದಂತೆ ಅಸ್ವಸ್ಥಗೊಂಡ ರಿಮ್ಶಾ ದಿಢೀರ್ ಕುಸಿದು ಬಿದ್ದಿದ್ದಾಳೆ. ಕುಟುಂಬಸ್ಥರು ತಕ್ಷಣವೆ ನೆರವಿಗೆ ಆಗಮಿಸಿದ್ದಾಳೆ. ನೀರು ಕುಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ರಿಮ್ಶಾಳಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ತಕ್ಷಣವೇ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ತಪಾಸಣೆ ನಡೆಸಿದ ವೈದ್ಯರು ಯುವತಿ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ ಎನ್ನಲಾಗಿದೆ.