ನ್ಯೂಸ್ ನಾಟೌಟ್: ತಂಪು ಪ್ರದೇಶದಿಂದ ಪ್ರವಾಸಿಗರ ಚಿತ್ತ ಸೆಳೆದಿರುವ ದಕ್ಷಿಣದ ಕಾಶ್ಮೀರ ಕೊಡಗಿನಲ್ಲಿ ಈಗ ಧಗಧಗ ಬಿಸಿಲಿನದ್ದೇ ಮಾತು. ದಿನದಿಂದ ದಿನಕ್ಕೆ ಸೂರ್ಯನ ಶಾಖ ಹೆಚ್ಚಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಬಗ್ಗೆ ಈಗಾಗಲೇ ಆರೋಗ್ಯ ಇಲಾಖೆ ಕೂಡ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸಲಹೆ ನೀಡಿದೆ. ಬಿಸಿಲಿನ ವೇಳೆ ನಡೆದಾಡುವುದನ್ನು ತಪ್ಪಿಸಿಕೊಳ್ಳಿ, ಹೆಚ್ಚು ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ, ಮಜ್ಜಿಗೆ, ಎಳನೀರು, ಹಣ್ಣಿನ ರಸ, ಗ್ಲೂಕೋಸ್ ಸೇರಿದಂತೆ ದ್ರವ ಪದಾರ್ಥಗಳನ್ನು ಹೆಚ್ಚಿಗೆ ಬಳಸುವಂತೆ ತಿಳಿಸಲಾಗಿದೆ.
ಅಲ್ಲದೆ ಕೊಡೆ, ತಂಪು ಕನ್ನಡಕ, ಟವಲ್ ಬಳಸಿ ಸಾರ್ವಜನಿಕ ಸ್ಥಳಗಳಲ್ಲಿ ನಡೆದುಕೊಂಡು ಹೋಗಬೇಕು. ಈ ಮೂಲಕ ಬಿಸಿಲಿನಿಂದ ತಪ್ಪಿಸಿಕೊಳ್ಳಬೇಕು ಎಂದು ಮಾಹಿತಿ ನೀಡಲಾಗಿದೆ. ಅಲ್ಲದೆ ತೆಳುವಾದ ಬಟ್ಟೆಯನ್ನು ಧರಿಸಿ, ಬಿಳಿ ಬಟ್ಟೆಯನ್ನೇ ಧರಿಸಿದರೆ ಉತ್ತಮ ಎಂದು ತಿಳಿಸಲಾಗಿದೆ.