ನ್ಯೂಸ್ ನಾಟೌಟ್: ಮಗನೋರ್ವ ತನ್ನ ತಂದೆಯ ಮುಖಕ್ಕೆ ಒಂದೇ ಸಮನೇ ಗುದ್ದಿ ಕ್ರೌರ್ಯ ಮೆರೆದಿರುವ ಘಟನೆ ತಮಿಳುನಾಡಿನ ಪೆರಂಬಲೂರಿ(Perambaluru)ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗಂಭೀರವಾಗಿ ಗಾಯಗೊಂಡಿದ್ದ ತಂದೆ ಸ್ಥಳದಲ್ಲೇ ಅಸ್ವಸ್ಥಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಕೃಷ್ಣಪುರಂನಲ್ಲಿ ಈ ಭೀಕರ ಘಟನೆ ನಡೆದಿದ್ದು, 68ವರ್ಷದ ಕುಲಂಡೈವೇಲು ಎಂಬ ವ್ಯಕ್ತಿಯ ಮೇಲೆ ಆತನ ಮಗ 40ವರ್ಷದ ಸಂತೋಷ್ ಎಂಬಾತ ಮುಖಾಮೂತಿ ನೋಡದೇ ಚಚ್ಚಿದ್ದಾನೆ. ಕುಲಂಡೈವೇಲು ಶ್ರೀ ಅಮೃತ ಸಾಗೋ ಎಂಬ ಅಕ್ಕಿ ಗಿರಣಿ ನಡೆಸುತ್ತಿದ್ದರು. ಅದರ ಅಧಿಕಾರವನ್ನು ತನಗೆ ವಹಿಸುವಂತೆ ಆಗಾಗ ಸಂತೋಷ್ ಕಿರುಕುಳ ನೀಡುತ್ತನಂತೆ. ಇದೇ ವಿಚಾರಕ್ಕೆ ಕೋಪದಲ್ಲಿ ತಂದೆ ಮುಖಕ್ಕೆ ಗುದ್ದಿ ಆತನ ಸಾವಿಗೆ ಸಂತೋಷ್ ಕಾರಣನಾಗಿದ್ದಾನೆ. ತಂದೆ ಗಂಭೀರವಾಗಿ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದರೂ ಬಿಡದ ಸಂತೋಷ್ ಬಿಡದೇ ಮುಖಕ್ಕೆ ಗುದ್ದಿದ್ದಾನೆ.
ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಆತನನ್ನು ತಡೆದು ಕುಲಂಡೈವೇಲು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಫೆಬ್ರುವರಿ 16ರಂದು ಈ ಘಟನೆ ನಡೆದಿದ್ದು, ಒಂದು ತಿಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಲಂಡೈವೇಲು ಇಂದು(ಎ.೨೯) ಕೊನೆಯುಸಿರೆಳೆದಿದ್ದಾರೆ. ಕುಲಂಡೈವೇಲು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಮೊದಲಿಗೆ ತಮ್ಮ ಮಗನ ವಿರುದ್ಧ ದೂರು ದಾಖಲಿಸಿದ್ದರು. ಬಳಿಕ ಅದನ್ನು ಹಿಂಪಡೆದಿದ್ದರು ಎನ್ನಲಾಗಿದೆ. ಇದೀಗ ಮತ್ತೆ ಕುಟುಂಬಸ್ಥರು ಸಂತೋಷ್ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ ಎನ್ನಲಾಗಿದೆ.