ಋತುಸ್ರಾವ ಅಂಗವಿಕಲತೆಯಲ್ಲ ಎಂದದ್ದೇಕೆ ಸ್ಮೃತಿ ಇರಾನಿ..? ಮಹಿಳೆಯರ ತಿಂಗಳ ವೇತನ ಸಹಿತ ರಜೆ ರದ್ದು ಪಡಿಸಲು ಸಚಿವೆ ಹೇಳಿದ್ದೇಕೆ?

ನ್ಯೂಸ್ ನಾಟೌಟ್ : ಋತುಸ್ರಾವ ಅಂಗವಿಕಲತೆಯಲ್ಲ ಮಹಿಳೆಯರಿಗೆ ಋತುಚಕ್ರ ಸಹಜ ಪ್ರಕ್ರಿಯೆ; ಇದನ್ನು ಪ್ರತಿಬಂಧಕ ಎಂದು ಪರಿಗಣಿಸಲಾಗದು. ಆದ್ದರಿಂದ ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರಿಗೆ ವೇತನ ಸಹಿತ ರಜೆ ಮಂಜೂರು ಮಾಡುವ ಯಾವುದೇ ನೀತಿಯ ಅಗತ್ಯ ಇಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಸ್ಮೃತಿ ಇರಾನಿ ಇಂದು(ಡಿ.14) ಹೇಳಿದ್ದಾರೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮತಿ ಇರಾನಿ ಅವರು ಮಹಿಳಾ ಉದ್ಯೋಗಿಗಳಿಗೆ ಕಡ್ಡಾಯ ವೇತನ ಸಹಿತ ಮುಟ್ಟಿನ ರಜೆಯ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮುಟ್ಟಿನ ರಜೆಯು ಉದ್ಯೋಗಿಗಳಲ್ಲಿ ಮಹಿಳೆಯರ ವಿರುದ್ಧ ತಾರತಮ್ಯಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ ಎನ್ನಲಾಗಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕರಡು ರಾಷ್ಟ್ರೀಯ ನೀತಿಯನ್ನು ರೂಪಿಸುವುದಾಗಿ ಘೋಷಿಸಿದರು. ದೇಶದಾದ್ಯಂತ ಸರಿಯಾದ ಮುಟ್ಟಿನ ನೈರ್ಮಲ್ಯ ನಿರ್ವಹಣೆ ಬಗ್ಗೆ ಜಾಗೃತಿ ನೀಡುವ ಗುರಿಯನ್ನು ಇದು ಹೊಂದಿದೆ. ಋತುಚಕ್ರದ ರಜೆಯ ವಿಷಯವು ಚರ್ಚೆಯ ವಿಚಾರವಾಗಿದೆ. ಸ್ಪೇನ್ ಇತ್ತೀಚೆಗೆ ಶಾಸನವನ್ನು ಅಂಗೀಕರಿಸಿದ್ದು ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ವೇತನ ಸಹಿತ ರಜೆ ನೀಡಲು ಅನುಮತಿಸಿದೆ. ಆದರೆ ಭಾರತದಲ್ಲಿ ಅಂತಹ ರಜೆಯ ಅಗತ್ಯವಿಲ್ಲ ಎಂದಿದ್ದಾರೆ.