ನ್ಯೂಸ್ ನಾಟೌಟ್ : ಎಟಿಎಂ ಸಿಬ್ಬಂದಿಯ ಅಲರ್ಟ್ ಕರೆಯಿಂದ ಇಬ್ಬರು ಕಳ್ಳರು ಓಡಿ ಹೋಗಿದ್ದು, ಎಂಟಿಎಂನಲ್ಲಿದ್ದ 7 ಲಕ್ಷ ರೂ. ಬೆಂಕಿಗಾಹುತಿಯಾಗಿದೆ ಎಂದು ವರದಿ ತಿಳಿಸಿದೆ.
ಬೆಂಗಳೂರಿನ ಅರಿಶಿನಕುಂಟೆಯ ರಾಷ್ಟ್ರೀಯ ಹೆದ್ದಾರಿ ಸಮೀಪದ ಆಕ್ಸಿಸ್ ಬ್ಯಾಂಕ್ ಎಂಟಿಎಂನ ಹಣವನ್ನು ಇಬ್ಬರು ಖದೀಮರು ಕಳ್ಳತನ ಮಾಡಲು ಮುಂದಾಗಿದ್ದರು. ಗ್ಯಾಸ್ ಕಟರ್ ಬಳಸಿ ಎಟಿಎಂ ಮಷಿನ್ ಕಟ್ಗೆ ಯತ್ನಿಸಿದ್ದಾರೆ.
ಎಂಟಿಎಂನಲ್ಲಿ 30 ಲಕ್ಷ ರೂ. ನಗದನ್ನು ಹಾಕಲಾಗಿತ್ತು. ಗ್ಯಾಸ್ ಕಟರ್ ಬಳಸಿ ಕಟ್ ಮಾಡಿದ್ದ ಹಿನ್ನೆಲೆ 7 ಲಕ್ಷ ರೂ.ನಷ್ಟು ನಗದು ಹಣ ಬೆಂಕಿಗಾಹುತಿಯಾಗಿತ್ತು. ಇನ್ನು ಉಳಿದ ಹಣವನ್ನು ಬ್ಯಾಂಕ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಎಂಟಿಎಂ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಖದೀಮರ ಓಡಾಟ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ನಗರ ಠಾಣೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಅರ್ಧದಷ್ಟು ಕಟ್ ಮಾಡಿದಾಗ ಬ್ಯಾಂಕ್ ಸಿಬ್ಬಂದಿ ಬ್ಯಾಂಕ್ ಕಟ್ಟಡ ಮಾಲೀಕರಿಗೆ ಕರೆ ಮಾಡಿ ಪರಿಶೀಲಿಸಲು ಹೇಳಿದ್ದಾರೆ. ತಕ್ಷಣ ಮಾಲೀಕರು ಲೈಟ್ ಹಾಕುತ್ತಿದ್ದಂತೆ ಖದೀಮರು, ಎಸ್ಕೇಪ್ ಆಗಿದ್ದು, ತಕ್ಷಣ ಟೌನ್ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಖದೀಮರ ಕಳ್ಳತನ ಕೃತ್ಯ ಬ್ಯಾಂಕ್ ಸಿಬ್ಬಂದಿಯ ಕರೆ ವಿಫಲಗೊಳಿಸಿದೆ.