ನ್ಯೂಸ್ ನಾಟೌಟ್ : ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಗೋ ಪೂಜೆ ಕಾರ್ಯಕ್ರಮ ನ.14 ರಂದು ನಡೆಯಿತು.ಪಯಸ್ವಿನಿ ಯುವಕ ಸಂಘ(ರಿ) ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು.
ಈ ವೇಳೆ ಪಯಸ್ವಿನಿ ಯುವಕ ಸಂಘ ಮತ್ತು ಭಕ್ತಾದಿಗಳಿಂದ ಕಾರ್ತಿಕ ದೀಪೋತ್ಸವ ಮತ್ತು ಬಲಿಯೇಂದ್ರ ಪೂಜೆ ನಡೆಯಿತು.ನಂತರ ಕಿರಣ್ ಚೌಟಾಜೆ ಸಂಪಾಜೆ ಮಾತನಾಡಿ ‘ತುಳುನಾಡಿನಲ್ಲಿ ದೀಪಾವಳಿಯಂದು ಆಚರಿಸಲಾಗುವ ಮತ್ತೊಂದು ವಿಶೇಷ ಆಚರಣೆಯೆಂದರೆ ಬಲಿಪಾಡ್ಯಮಿ. ವಿಷ್ಣುವು ವಾಮನನ ಅವತಾರವನ್ನು ಎತ್ತಿದ ಕಥೆಯ ಹಿನ್ನೆಲೆಯಲ್ಲಿ ಬಲಿಪಾಡ್ಯಮಿಯ ಹಬ್ಬವು ನಡೆಯುತ್ತದೆ. ಈ ಸಂದರ್ಭದಲ್ಲಿ ಬಲಿ ಪಾಡ್ಯಮಿ ಹಬ್ಬದ ಹಿನ್ನಲೆಯನ್ನು ಸೇರಿದ ಭಕ್ತಾಧಿಗಳಿಗೆ ವಿವರಿಸಿದರು.ಈ ವೇಳೆ ದೇವಾಲಯದ ಮೊಕ್ತೇಸರರಾದ ಎಂ.ಬಿ. ಸದಾಶಿವ ಮಾತನಾಡಿ ಗೋ ಪೂಜೆಯ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಸಂಪಾಜೆಯ ಸಮಸ್ತ ಭಕ್ತಾದಿಗಳು, ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಪಯಸ್ವಿನಿ ಯುವಕ ಸಂಘದ(ರಿ) ಪದಾಧಿಕಾರಿಗಳು ಮತ್ತು ಹಿರಿಯ ಕಿರಿಯ ಸದಸ್ಯರುಗಳು ಭಾಗವಹಿಸಿ ಶ್ರೀ ದೇವರ ಗಂಧ-ಪ್ರಸಾದವನ್ನು ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು.