ನ್ಯೂಸ್ ನಾಟೌಟ್: ಬಣ್ಣ ಬೆರೆಸುವ ಪೇಂಟ್ ಮಿಕ್ಸರ್ಗೆ ಕೂದಲು ಸಿಲುಕಿ ಮಹಿಳೆ ಮೃತಪಟ್ಟಿ ಘಟನೆ ಬೆಂಗಳೂರಿನ ನೆಲಗದರನಹಳ್ಳಿಯಲ್ಲಿರುವ ಶ್ರೀಪೇಂಟ್ಸ್ ಕಾರ್ಖಾನೆಯಲ್ಲಿ ಬುಧವಾರ(ನ.8) ನಡೆದಿದೆ.
ಮಲ್ಲತ್ತಹಳ್ಳಿಯಲ್ಲಿ ವಾಸವಿದ್ದ 33 ವರ್ಷದ ಶ್ವೇತಾ ಮೃತ ಮಹಿಳೆ ಎಂದು ವರದಿ ತಿಳಿಸಿದೆ.
ಗ್ರೈಂಡರ್ಗೆ ಜಡೆ ಸಿಲುಕಿ ಮಹಿಳೆಯ ತಲೆ ಕಟ್ ಆಗಿದ್ದು, ಇನ್ನುಳಿದವರು ಗ್ರೈಂಡರ್ ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.