ನ್ಯೂಸ್ ನಾಟೌಟ್ : ಕೊಡಗು ಪರಿಸರದಲ್ಲಿ ಕಾಡು ಪ್ರಾಣಿಗಳ ಹಾವಳಿ ಜೋರಾಗಿದೆ.ಅದರಲ್ಲೂ ಕಾಡಾನೆ ಹಾಗೂ ಹುಲಿ ದಾಳಿಗೊಳಗಾಗಿ ವಿಪರೀತ ಸಾಕು ಪ್ರಾಣಿಗಳು ಉಸಿರು ಚೆಲ್ಲುತ್ತಿವೆ.ಮಾತ್ರವಲ್ಲ ಈ ಪರಿಸರದಲ್ಲಿ ಓಡಾಡುವ ಕೆಲ ಜನರು ಕೂಡ ಪ್ರಾಣ ಭಯದಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದೀಗ ಹುಲಿ ದಾಳಿಯಿಂದಾಗಿ ಮೇಯಲೆಂದು ಕಟ್ಟಿ ಹಾಕಿದ್ದ ಮೂರು ಆಡುಗಳು ಕಣ್ಮರೆಯಾಗಿವೆ.ಕೊಡಗಿನ ಪೊನ್ನಂಪೇಟೆ ತಾಲೂಕಿನ ಬಾಳಲೆ ಗ್ರಾ.ಪಂ.ವ್ಯಾಪ್ತಿಯ ರುದ್ರಬೀಡು ಗ್ರಾಮದಲ್ಲಿ ಈ ಘಟನೆ ವರದಿಯಾಗಿದ್ದು,ಹೊನ್ನಿಕೊಪ್ಪಲಿನ ಎಂ.ಬಿ.ಸಣ್ಣಪ್ಪ ಎಂಬುವರಿಗೆ ಸೇರಿದ 3 ಆಡುಗಳು ಇದಾಗಿವೆ ಎಂದು ಹೇಳಲಾಗಿದೆ.ಕಳೆದ ಕೆಲದಿನಗಳ ಹಿಂದೆಯಷ್ಟೇ ಇದೇ ಸ್ಥಳದಲ್ಲಿ ಹುಲಿದಾಳಿಯಿಂದ ಸಾವನ್ನಪ್ಪಿದ್ದ ಕಾಡುಹಂದಿಯ ಕಳೇಬರ ಪತ್ತೆಯಾಗಿತ್ತು.ಡಿಆರ್ಎಫ್ಓ ಹಾಲೇಶ್ ಮತ್ತು ಸಿಬ್ಬಂದಿ ವರ್ಗ ಈ ಬಗ್ಗೆ ಪರಿಶೀಲನೆ ನಡೆಸಿದರು.