ನ್ಯೂಸ್ ನಾಟೌಟ್: ಮುಂಬರುವ ಲೋಕಸಭಾ ಚುನಾವಣೆಗೆ ಎಲ್ಲ ರೀತಿಯ ತಯಾರಿ ನಡೆಯುತ್ತಿದೆ. ಈ ವೇಳೆ ಅಭ್ಯರ್ಥಿಗಳ ಆಯ್ಕೆಯೂ ಜೋರಾಗಿ ನಡೆಯುತ್ತಿರುವಾಗಲೇ ಸ್ವಾಮೀಜಿಯೊಬ್ಬರು ನನಗೂ ಟಿಕೆಟ್ ಬೇಕೆಂದು ಹಠ ಹಿಡಿಯುತ್ತಿದ್ದಾರೆ. ಬಿಜೆಪಿಯೊಳಗೆ ಸ್ವಾಮೀಜಿಯ ಒತ್ತಡದಿಂದ ಇರಿಸುಮುರಿಸು ಉಂಟಾಗುತ್ತಿದೆ ಅನ್ನುವಂತಹ ಮಾಹಿತಿಗಳು ಕೂಡ ಲಭ್ಯವಾಗಿವೆ.
ಹಾಲಿ ಸಂಸದ ಭಗವಂತ ಖೂಬಾ (bhagwanth khuba) ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡುವುದು ಅನ್ನುವುದರ ಕುರಿತು ಚರ್ಚೆ ನಡೆಯುತ್ತಿದೆ.
ಮಾಜಿ ಸಚಿವ ಪ್ರಭು ಚೌಹಾಣ್, ಶಾಸಕ ಶರಣು ಸಲಗರ್ ಸೇರಿದಂತೆ ಹಲವು ಬಿಜೆಪಿ (BJP) ನಾಯಕರು ಈ ಬಾರಿ ಯಾವುದೇ ಕಾರಣಕ್ಕೂ ಭಗವಂತ ಖೂಬಾ ಅವರಿಗೆ ಬೀದರ್ ಲೋಕಸಭಾ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಈ ನಡುವೆ ಮಠಾಧೀಶರು ನಾನಿದ್ದೇನೆ ನನಗೆ ಟಿಕೆಟ್ ಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿದೆ. ಟಿಕೆಟ್ ಕೊಡುವಂತೆ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ (shambhulinga shivacharya swamij) ಮನವಿ ಮಾಡಿದ್ದಾರೆ.
ಔರಾದ್ ತಾಲೂಕಿನ ಢೋಣಗಾಂವ ಮಠದ ಪೂಜ್ಯ ಶಂಭುಲಿಂಗ ಶಿವಾಚಾರ್ಯರು ಈ ಸಲು ಬಿಜೆಪಿಯ ಟಿಕೆಟ್ ನನಗೆ ಕೊಡಬೇಕು ಎಂದು ಜಿಲ್ಲಾ ಮಠಾಧೀಶರ ಒಕ್ಕೂಟದಿಂದ ಬಿಜೆಪಿಯ ಕೆಲಸ ನಾಯಕರು ಸಂಘ ಪರಿವಾರದ ಕೆಲವು ನಾಯಕರನ್ನ ಭೇಟಿಯಾಗಿದ್ದಾರೆ. ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶೀ ಜಿ.ವಿ. ರಾಜೇಶ್ ಅವರನ್ನೂ ಕೂಡಾ ಭೇಟಿಯಾಗಿ ಮನವಿ ಮಾಡಿದ್ದು, ಬೀದರ್ ಜಿಲ್ಲೆಯಲ್ಲಿ ಮಠಾಧೀಶರಿಗೆ ಟಿಕೆಟ್ ಕೊಟ್ಟರೆ ಪಕ್ಷಕ್ಕೆ ಆಗುವ ಲಾಭದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಸಂಸದ ಭಗವಂತ್ ಖೂಬಾರಿಗೆ ಈ ಸಲ ಟಿಕೆಟ್ ಕೊಡಬಾರದು ಅನ್ನುವ ಕೂಗು ಎದ್ದಿರುವ ಬೆನ್ನಲ್ಲೇ ಕೆಲ ಮಾಠಾಧೀಶರು ಬಿಜೆಪಿ ಟಿಕೆಟ್ಗಾಗಿ ಬೇಡಿಕೆಯಿಟ್ಟಿದ್ದಾರೆ. ಬೀದರ್ ಟಿಕೆಟ್ಗಾಗಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದ ನಿಯೋಗವು ಆರ್ ಎಸ್ ಎಸ್ ಮುಂಖಡರು ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ದು, ಈ ಬಾರಿ ಬೀದರ್ ಟಿಕೆಟ್ ಶಿವಾಚಾರ್ಯ ಸ್ವಾಮೀಜಿಗೆ ನೀಡುವಂತೆ ಮನವಿ ಮಾಡಿದೆ.
ಶರಣರ ನಾಡಿನ ಪ್ರತಿನಿಧಿಯಾಗಿ ಮಠಾಧಿಶರಿಬ್ಬರು ಲೋಕಸಭೆ ಪ್ರವೇಶ ಮಾಡುವುದನ್ನ ಎದುರುನೋಡುತ್ತಿದ್ದೆವೆಂದು ಸ್ವಾಮೀಜಿ ಹೇಳುತ್ತಿದ್ದಾರೆ. ಇನ್ನೂ ಬೀದರ್ ಎಂಪಿ ಭಗವಂತ್ ಖೂಬಾ ಜಿಲ್ಲೆಯ ಅಭಿವೃದ್ದಿಯನ್ನ ಮಾಡಿಲ್ಲ ಹೆಸರಿಗಷ್ಟೇ ಅವರು ಸಂಸದರಾಗಿದ್ದಾರೆ. ಹೀಗಾಗಿ ಅವರನ್ನ ಬದಲಾಯಿಸಿ ಸ್ವಾಮೀಜಿಗಳಿಗೆ ಟಿಕೆಟ್ ಕೊಡಬೇಕು ಎಂದು ಹುಡುಗಿ ಗ್ರಾಮದ ವಿರಕ್ತ ಮಠದ ಚನ್ನಮಲ್ಲ ಸ್ವಾಮೀಜಿ ಆಗ್ರಹಿಸಿದ್ದಾರೆ.
ಇನ್ನೂ ಬೀದರ್ ಸಂಸದ ಭಗವಂತ್ ಖೂಬಾಗೆ ಸ್ವಪಕ್ಷದ ಶಾಸಕರೇ ತಿರುಗಿ ಬಿದ್ದಿದ್ದು ಭಗವಂತ್ ಖೂಬಾ ಹಾಟಾವೋ ಬಿಜೆಪಿ ಬಚಾವೋ ಎಂದು ಭಹಿರಂಗವಾಗಿಯೇ ಔರಾದ್ ಶಾಸಕ ಪ್ರಭು ಚೌಹಾನ್ ಹೇಳುತ್ತಿದ್ದಾರೆ.