ನ್ಯೂಸ್ ನಾಟೌಟ್ : ‘ಕಾಂತಾರ’ ಈ ಚಲನಚಿತ್ರ ಇಡೀ ವಿಶ್ವದಾದ್ಯಂತ ಭಾರಿ ಮೆಚ್ಚುಗೆಯನ್ನು ಪಡೆದುಕೊಂಡಿತ್ತು.ಹಲವು ಜನ ಈ ಚಿತ್ರವನ್ನು ಮೆಚ್ಚಿ ಕೊಂಡಾಡಿದ್ದರು.ಅದರಲ್ಲೂ ನಟ ರಿಷಬ್ ಶೆಟ್ಟಿಯವರ ಅಭಿನಯಕ್ಕೆ ಜನ ಫಿದಾ ಆಗಿದ್ದರು.
ಇದೀಗ ಮಡಿಕೇರಿಯ ದಸರಾ ಉತ್ಸವದಲ್ಲಿ ಕಾಂತಾರ ದೈವದ ಕಲಾಕೃತಿಯೊಂದು ಜನರ ಮನವನ್ನು ಸೆಳೆಯುತ್ತಿದೆ.ಹೌದು, ಮೈಸೂರಿನ ಮರಳು ಶಿಲ್ಪಿ ಎಂದೇ ಖ್ಯಾತಿ ಪಡೆದ ಎಂ.ಎನ್.ಗೌರಿ ಅವರು ಈ ಅದ್ಭುತ ಕಲಾಕೃತಿಗೆ ಸಾಕ್ಷಿಯಾಗಿದ್ದಾರೆ.ಈ ಸುಂದರ ದೃಶ್ಯವನ್ನು ನೋಡಿ ಜನ ಕಣ್ತುಂಬಿಕೊಳ್ಳುತ್ತಿದ್ದಾರೆ.
ಈಗಾಗಲೇ ದೇಶ-ವಿದೇಶಗಳಲ್ಲಿ ಮರಳು ಶಿಲ್ಪವನ್ನು ರಚಿಸುವ ಮೂಲಕ ಖ್ಯಾತಿ ಹೆಚ್ಚಿಸಿಕೊಂಡಿರುವ ಇವರು ಈ ಆಕರ್ಷಕ ಕಲಾಕೃತಿಗೆ ಮೂರು ದಿನಗಳನ್ನು ತೆಗೆದುಕೊಂಡಿದ್ದಾರೆ.ಇದೀಗ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯ ಮುಂಭಾಗದಲ್ಲಿ ಜನರ ಮುಂದೆ ಉತ್ತಮ ಫಲಿತಾಂಶವನ್ನು ಕಂಡುಕೊಳ್ಳುತ್ತಿದ್ದಾರೆ.ಈ ಕಲಾಕೃತಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು,ಸೆಲ್ಫಿ ತೆಗೆದು ಸಂಭ್ರಮಿಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಎಂ.ಎನ್.ಗೌರಿ ‘ಕೊಡಗಿನ ಸುಂದರ ಪರಿಸರ ರಕ್ಷಣೆಯಾಗಲಿ ಎನ್ನುವ ಸಂದೇಶವನ್ನು ನೀಡುವ ಮೂಲ ಚಿಂತನೆಯಡಿ ಈ ಕಲಾಕೃತಿ ಮೂಡಿ ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಒಟ್ಟಿನಲ್ಲಿ ಈ ಕಲಾಕೃತಿ ನೋಡಿ ಕಲಾಸಕ್ತರು ಶ್ಲಾಘನೆ ವ್ಯಕ್ತ ಪಡಿಸುತ್ತಿದ್ದಾರೆ.