ನ್ಯೂಸ್ ನಾಟೌಟ್: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಧಾರವಾಡ ನಗರದ ಆಲೂರು ವೆಂಕಟರಾವ್ ವೃತ್ತದ ಬಳಿಯ ಶಿಕ್ಷಕರ ತರಬೇತಿ ಸಂಸ್ಥೆಯ ಆವರಣದಲ್ಲಿರುವ ಸರ್ಕಾರಿ ಮಾದರಿ ಪ್ರಾಯೋಗಿಕ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ಹಾಗೂ ಪೋಷಕರು ಯಾವುದೇ ಭೇದ ಭಾವವಿಲ್ಲದೆ ಭಾಗವಹಿಸಿದ್ದು ಎಲ್ಲರ ಗಮನ ಸೆಳೆಯಿತು.
ಶ್ರೀಕೃಷ್ಣನ ಜನ್ಮಾಷ್ಟಮಿಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳೂ ಪೋಷಕರೊಡನೆ ವೇಷ ತೊಟ್ಟು ಸಂಭ್ರಮಿಸಿದ್ದಾರೆ. ಧಾರವಾಡದ ಸರ್ಕಾರಿ ಶಾಲೆಯಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ಮುಸ್ಲಿಂ ಮಕ್ಕಳು ಶ್ರೀ ಕೃಷ್ನ ಮತ್ತು ರಾಧೆಯ ವೇಷ ಧರಿಸಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಈ ಶಾಲೆಯಲ್ಲಿ 1ರಿಂದ 8 ನೇ ತರಗತಿಯವರೆಗೆ 320 ಬಾಲಕಿಯರು ಓದುತ್ತಿದ್ದಾರೆ. ಈ ಪೈಕಿ ಶೇ. 60 ರಷ್ಟು ಬಾಲಕಿಯರು ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ. ಮುಸ್ಲಿಂ ವಿದ್ಯಾರ್ಥಿಗಳು ಕೃಷ್ಣ ಹಾಗು ರಾಧೆಯ ವೇಷ ತೊಟ್ಟು ಗಮನ ಸೆಳೆದಿದ್ದು, ಶ್ರೀಕೃಷ್ಣ-ರಾಧೆಯರ ವೇಷ ತೊಟ್ಟು ತಮ್ಮ ಪೋಷಕರೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ಸಂಭ್ರಮದಿಂದ ಭಾಗಿಯಾಗಿದ್ದರು.