ನ್ಯೂಸ್ ನಾಟೌಟ್: ತನ್ನ ಕಾಲೇಜಿನ ರಹಸ್ಯ ತಾಯಿಗೆ ಗೊತ್ತಾಗಿದೆ ಎಂದು ಹೆತ್ತ ತಾಯಿಯನ್ನೇ ಮಗಳು 30 ಬಾರಿ ಇರಿದು ಮುಗಿಸಿದ ಘಟನೆ ನಡೆದಿದೆ. ಆಕೆಯನ್ನು ಕಾಲೇಜಿನಿಂದ ಹೊರಹಾಕಿದ್ದರು, ಆ ವಿಚಾರ ಹೇಗೋ ತಾಯಿಗೆ ತಿಳಿದಿತ್ತು, ಈ ಕುರಿತು ತಾಯಿ ಪ್ರಶ್ನೆ ಮಾಡಿದಾಗ ಕೋಪಗೊಂಡ ಮಗಳು ತಾಯಿಯನ್ನು ಅಂತ್ಯ ಮಾಡಿದ್ದಾಳೆ.
2020ರಲ್ಲಿ ಈ ಘಟನೆ ಅಮೆರಿಕದಲ್ಲಿ ಘಟನೆ ನಡೆದಿತ್ತು, ಇದೀಗ ಸೆಪ್ಟೆಂಬರ್ 28ರಂದು ಸಿಡ್ನಿ ಪೊವೆಲ್ ಗೆ ಕೋರ್ಟ್ ಶಿಕ್ಷೆ ಪ್ರಕಟಿಸಲಿದೆ. ಮೌಂಟ್ ಯೂನಿಯನ್ ಯೂನಿವರ್ಸಿಟಿಯ ಹಳೆಯ ವಿದ್ಯಾರ್ಥಿನಿ ಪೊವೆಲ್ ಅನ್ನು ತಪ್ಪಿತಸ್ಥೆ ಎಂದು ಕೋರ್ಟ್ ಘೋಷಿಸಿದೆ.
2020ರ ಮಾರ್ಚ್ 3 ರಂದು ರಕ್ತಸಿಕ್ತ ಸ್ಥಿತಿಯಲ್ಲಿ ಬ್ರೆಂಡಾ ಪತ್ತೆಯಾಗಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಸಾ* ವನ್ನಪ್ಪಿದ್ದರು. ಪೊವೆಲ್ ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದರು, ಆಕೆ ತನ್ನ ತಾಯಿಯನ್ನು ಕೊಲೆ ಮಾಡಿದಾಗ, ಮಾನಸಿಕ ಸ್ಥಿತಿ ಸರಿ ಇರಲಿಲ್ಲ ಎಂದು ವಕೀಲರು ವಾದಿಸಿದ್ದಾರೆ.
ಒಂದು ಬಾರಿಯಲ್ಲ 30 ಬಾರಿ ತಾಯಿಯ ಚಾ* ಕುವಿನಿಂದ ಇರಿದಿದ್ದಾರೆ, ಆಕೆಯ ಉದ್ದೇಶ ಸ್ಪಷ್ಟವಾಗಿತ್ತು ಎಂದು ನ್ಯಾಯಾಲಯ ಹೇಳಿದೆ, ಪೊವೆಲ್ ಶಿಕ್ಷೆಯನ್ನು ಸೆಪ್ಟೆಂಬರ್ 28ರಂದು ನಿಗದಿಪಡಿಸಲಾಗಿದೆ.