ನ್ಯೂಸ್ ನಾಟೌಟ್ : ಕೊಡಗು ಸಂಪಾಜೆಯ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಸೆ.23ರಂದು ನಡೆಯಿತು.
ಕೊಡಗು ಸಂಪಾಜೆಯ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ಅನಂತ್’ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಅವರು ಸಂಘವು 2022-23ನೇ ಸಾಲಿನಲ್ಲಿ 239 ಕೋಟಿಗೂ ಮೀರಿ ವ್ಯವಹಾರ ಮಾಡಿದೆ.,32, 25, 962.18 ಲಕ್ಷ ವಾರ್ಷಿಕ ಲಾಭದಲ್ಲಿದ್ದು, ಸದಸ್ಯರುಗಳಿಗೆ ಶೇ.8.5 ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘವು ಸಂಪಾಜೆ ಮತ್ತು ಚೆಂಬು ಗ್ರಾಮಗಳನ್ನು ಒಳಗೊಂಡಿದ್ದು, ಎರಡು ಗ್ರಾಮಗಳ ಪ್ರತ್ಯೇಕ ಸಂಘ ಸ್ಥಾಪನೆಗೆ ಚೆಂಬು ಗ್ರಾಮದ ಹೊಸೂರು ಶಿವಪ್ರಸಾದ್, ರವಿರಾಜ್ ಹೊಸೂರು, ಪಿ. ಆರ್’ ದಿನೇಶ್ ಮತ್ತು ಗುಂಡಿಮಜಲು ಗಣಪಯ್ಯನವರು ಮತ್ತು ಸಂಪಾಜೆಯಿಂದ ಪಿ . ಎಲ್ ಸುರೇಶ್ ರವರು ಟರಾವು ಮಂಡಿಸಿದರು.
ಸಭೆಯಲ್ಲಿ ಮುಂದಿನ ಯೋಜನೆಗಳ ಕುರಿತಂತೆ ಚರ್ಚೆ ನಡೆಸಯಿತು. ಈ ವೇಳೆ ಶಿವಪ್ರಸಾದ್ ,ಸುರೇಶ್ ,ಬಲ್ಯ ಮನೆ ಗಣಪತಿ, ಹಿರಿಯ ಸಹಕಾರಿ ಶಿವರಾಮ ಬಿ.ಆರ್ , ಸುಬ್ರಹ್ಮಣ್ಯ ಉಪಾಧ್ಯಾಯ, ಬಿ . ಬಿ .ಪುರುಷೋತ್ತಮ, ಮೀನಾಕುಮಾರಿ, ಕುಮಾರ್ ಚಿದ್ಕಾರ್ , ವೆಂಕಪ್ಪ ಮಾಸ್ತರ್, ರಮಾದೇವಿ ಕಳಗಿ, ಶ್ರೀನಿವಾಸ ನಿಡಿಂಜಿ , , ದೇವಪ್ಪ ಕೆ.ಕೆ, ಕೊರಗಪ್ಪ, ಮಾಯಿಲಪ್ಪ, ವಾಸುದೇವ ನಿ ಡಿಂಜಿ, ಹರೀಶ್ ಊರುಬೈಲು , ತಿರುಮಲ ಸೋನಾ ಮುಂತಾದವರು ಮಾತನಾಡಿದರು. ಈ ಸಂದರ್ಭದಲ್ಲಿ ಸರ್ವ ಸದಸ್ಯರು ಉಪಸ್ಥಿತರಿದ್ದರು.