ನ್ಯೂಸ್ ನಾಟೌಟ್ : ಅದೊಂದು ದಿನ ಮುಸ್ಲಿಂ ವ್ಯಕ್ತಿಯ ಕನಸಿನಲ್ಲಿ ಅಂಬಾದೇವಿ ಬರ್ತಾಳೆ. ಇದರ ನಂತರ ಅಬ್ಬುಸಾಹೇಬ ಅವರು ಹೊನ್ನೂರಲಿ ದರ್ಗಾ ಹಾಗೂ ಬಂಗಾಳಿ ಅಂಬಾದೇವಿ ದೇವಸ್ಥಾನ ಕಟ್ಟಿಸಿ ನಿತ್ಯ ಪೂಜೆ ಸಲ್ಲಿಸಿ ಇದೀಗ ಸುದ್ದಿಯಾಗಿದ್ದಾರೆ. ಈ ಕುರಿತ ವಿಶೇಷ ವರದಿ ಇಲ್ಲಿದೆ.
ಅವರು ಮುಸ್ಲಿಂ ಸಮುದಾಯದಕ್ಕೆ ಸೇರಿದ ವ್ಯಕ್ತಿ. ವೀಕಲಚೇತನರು. ಪಂಕ್ಚರ್ ಹಾಕುವ ಕಾಯಕ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಆದರೆ ಇತ್ತೀಚೆಗೆ ಅವರು ಮಾಡುವ ಕಾರ್ಯಕ್ಕೆ ಇಡೀ ಗ್ರಾಮದಲ್ಲಿ ಭಾವೈಕ್ಯ ಮೂಡಿದೆ.ಈ ಮೂಲಕ ಶ್ಲಾಘನೆ ವ್ಯಕ್ತವಾಗಿದೆ.ಇವರು ದರ್ಗಾ ಕಟ್ಟಿಸಿದ್ದೂ ಅಲ್ಲದೇ ಅಲ್ಲೆ ಪಕ್ಕದಲ್ಲಿಯೇ ಹಿಂದೂ ದೇವಾಲಯವನ್ನೂ ಕಟ್ಟಿಸಿದ್ದು,ದೇವಸ್ಥಾನದಲ್ಲಿ ನಿತ್ಯ ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯದ ಸಂದೇಶ ಸಾರಿದ್ದಾರೆ.
ಈ ಘಟನೆಗೆ ಸಾಕ್ಷಿಯಾಗಿದ್ದು, ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮ. ಭಾವೈಕ್ಯ ಸಂದೇಶ ಸಾರುತ್ತಿರೋ ಅಬ್ಬುಸಾಹೇಬ ಹಿಂದೂ ದೇವಾಲಯ (Hindu Temple) – ದರ್ಗಾ (Darga) ಕಟ್ಟಿಸಿ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ಮೂಲತಃ ಕೊಪ್ಪಳ (Koppala) ಜಿಲ್ಲೆಯ ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದ ಇವರು ಹುಟ್ಟಿನಿಂದ ವೀಕಲ ಚೇತನರಾಗಿದ್ದಾರೆ.
ಇಲ್ಲಿ ಯಾವುದೇ ಭೇದ-ಭಾವದವಿಲ್ಲ. ಅಂತೆಯೇ ಹುಟ್ಟಿನಿಂದಲೇ ಹಿಂದೂ-ಮಸ್ಲಿಂ-ಕ್ರೈಸ್ತರೆಲ್ಲರೂ ಒಂದೇ ಎನ್ನುವ ಅಂಶವನ್ನು ಮೈಗೂಡಿಸಿಕೊಂಡು ಬೆಳೆದ ಇವರು,ವಿಶೇಷವಾಗಿ ಹಾಗೂ ಎಲ್ಲರಿಗೂ ಸ್ಪೂರ್ತಿಯಾಗಿ ಬೆಳೆದವರು. ಜೀವನ ಸಾಗಿಸುವ ಸಲುವಾಗಿ ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಪಂಕ್ಚರ್ ಶಾಪ್ ಇಟ್ಟುಕೊಂಡು ಜೀವನ ಮಾಡುತ್ತಿದ್ದಾರೆ.
ಕನಸಿನಲ್ಲಿ ಅಂಬಾದೇವಿ ಬಂದಿದ್ದು, ಆಕೆಯ ಅಣತಿಯಂತೆ ಮತ್ತಷ್ಟು ಭಾವೈಕ್ಯ ಮೂಡಿಸುವ ನಿಟ್ಟಿನಲ್ಲಿ ಅಬ್ಬುಸಾಹೇಬ ಅವರು ಹೊನ್ನೂರಲಿ ದರ್ಗಾ ಹಾಗೂ ಬಂಗಾಳಿ ಅಂಬಾದೇವಿ ದೇವಸ್ಥಾನ ಕಟ್ಟಿಸಿ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ.ಕಳೆದ ಎರಡು ವರ್ಷದ ಹಿಂದೆ ಈ ಗ್ರಾಮದಲ್ಲಿ ಅಂಬಾದೇವಿ ಭಾವೈಕ್ಯತಾ ಆಶ್ರಯ ನಿರ್ಮಾಣವಾಗಿದೆ.
ಕಳೆದ ಐದು ತಿಂಗಳ ಹಿಂದೆ ಆಶ್ರಮದ ಭಕ್ತರೆಲ್ಲರೂ 15 ದಿನಗಳಲ್ಲಿಯೇ ಭವ್ಯವಾದ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ.ಇದು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಯಾವುದೇ ಪ್ರತಿಫಲಾಪೇಕ್ಷೆ ಬಯಸದೇ ಪೂಜೆ ಮಾಡುತ್ತಿರುವ ಅಬ್ಬುಸಾಹೇಬ ಅವರು ದೇಶದಲ್ಲಿ ಮತ್ತಷ್ಟು ಭಾವೈಕ್ಯತೆ ಹೆಚ್ಚಾಗಬೇಕು ಎಂದು ಹೇಳುತ್ತಾರೆ.
ಒಟ್ಟಿನಲ್ಲಿ ಜಾತಿ-ಧರ್ಮ ಅಂತಾ ಕಿತ್ತಾಡಿಕೊಳ್ಳುವ ಜನರ ಮಧ್ಯೆ ಅಬ್ಬುಸಾಹೇಬ ಅವರ ಭಾವೈಕ್ಯತಾ ಕಾರ್ಯ ಎಲ್ಲರೂ ಮೆಚ್ಚುವಂತಾಗಿದೆ. ಇವರ ಕಾರ್ಯ ಇವರ ನಡೆ ಇನ್ನಷ್ಟೂ ಜನರಿಗೆ ಮಾದರಿಯಾಗಲಿ.