ನ್ಯೂಸ್ ನಾಟೌಟ್ :ಪುತ್ತೂರಿನ ದರ್ಬೆಯ ಪ್ರತಿಷ್ಠಿತ ಶಾಪಿಂಗ್ಮಾಲ್(shoppingmall) ಸಿಬ್ಬಂದಿಗಳಿಗೆ ತಲ್ವಾರ್ ತೋರಿಸಿ ಬೆದರಿಕೆ ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಬಪ್ಪಳಿಗೆ ನೆಲ್ಲಿಗುಂಡಿ ನಿವಾಸಿ ಗಾಡ್ವಿನ್ ದಿನಕರ್ ನೀಡಿದ ದೂರಿನ ಮೇರೆಗೆ ಪ್ರಜ್ವಲ್ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ದರ್ಬೆ ಶೋ ರೂಮ್ (showroom)ವೊಂದರಲ್ಲಿ ಸೇಲ್ಸ್ ಮ್ಯಾನ್(salesman) ಆಗಿ ಕೆಲಸ ಮಾಡಿಕೊಂಡಿರುವ ದಿನಕರ್ ಜೂ.9 ರಂದು ರಾತ್ರಿ ವೇಳೆ ಗೆಳೆಯರಾದ ರಕ್ಷಿತ್, ಭವಿತ್, ಹೇಮಂತ್ ಮತ್ತು ಸಂದೇಶ್ ರವರೊಂದಿಗೆ ಪುತ್ತೂರಿನ ದರ್ಬೆಯಲ್ಲಿರುವ ಲಾಡ್ಜ್ ನ ಎರಡನೇ ಅಂತಸ್ತಿನಲ್ಲಿರುವ ರೂಮ್ನಲ್ಲಿ ಹುಟ್ಟುಹಬ್ಬ(Birthday) ಆಚರಣೆ ಮಾಡಿ ನಂತರ ಡಿನ್ನರ್ ಪಾರ್ಟಿಯನ್ನು ಮಾಡಿದ್ದಾರೆ.
ಈ ವೇಳೆ ಹೆದರಿದ ಸಿಬ್ಬಂದಿಯೋರ್ವ ಓಡುವ ಭರದಲ್ಲಿ ಬಿದ್ದು ಮೂರು ಹಲ್ಲು ಮುರಿದಿದೆ ಎನ್ನಲಾಗಿದೆ. ತಲ್ವಾರು ತೋರಿಸಿ ಬೆದರಿಕೆ ಹಾಕಿದ ಯುವಕನ ವಿರುದ್ಧ ಶಾಪಿಂಗ್ ಮಾಲ್ ಸಿಬ್ಬಂದಿಗಳು ದೂರು ನೀಡಲು ಮುಂದಾಗಿದ್ದಾರೆ. ತಲ್ವಾರ್ ಝಳಪಿಸಿದ ಯುವಕ ಗಾಂಜಾ ವ್ಯಸನಿ ಎಂದು ಅಲ್ಲಿನ ಸ್ಧಳೀಯರು ದೂರಿದ್ದಾರೆ.ಸ್ಧಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು ಈ ದೃಶ್ಯ ಸಿಸಿ ಕ್ಯಾಮಾರ(cc camera)ದಲ್ಲಿ ಸೆರೆಯಾಗಿದ್ದು ವೈರಲ್(viral) ಆಗಿದೆ.
ದಿನಕರ್ ತನ್ನ ಪರಿಚಯದ ಪ್ರಜ್ವಲ್ ಎಂಬಾತನಿಗೆ ದೂರವಾಣಿ ಕರೆಮಾಡಿ ಮಾತನಾಡುತ್ತಿದ್ದ ವೇಳೆ ದಿನಕರ್ ರೂಮ್ ನಲ್ಲಿದ್ದ ಸ್ನೇಹಿತ “ಪೋನ್ ಕಾಲ್ ಕಟ್ ಮಾಡು ನೀನು ಹುಟ್ಟು ಹಬ್ಬದ ಪಾರ್ಟಿಗೆ ಬಂದವ ನೀನು ಇಲ್ಲಿ ಏನು ಪೋನ್ ಮಾಡುತ್ತೀಯಾ?” ಎಂದು ಹೇಳಿರುತ್ತಾನೆ. ಆಗ ದಿನಕರ್ ಫೋನ್ ಕಾಲ್ ಕಟ್ ಮಾಡಿದ್ದಾನೆ. ಇದನ್ನು ಫೋನಲ್ಲಿ ಕೇಳಿಸಿಕೊಂಡಿದ್ದ ಪ್ರಜ್ವಲ್ ಸ್ವಲ್ಪ ಸಮಯದ ನಂತರ ಏಕಾಏಕಿಯಾಗಿ ದಿನಕರ್ ಇರುವ ರೂಮ್ಗೆ ಬಂದು “ನನಗೆ ಪೋನ್ ನಲ್ಲಿ ಬೈದವರು ಯಾರು?” ಎಂದು ಕೇಳಿದ್ದಾನೆ.ಆಗ ದಿನಕರ್ “ನಿನಗೆ ಬೈದದ್ದು ಅಲ್ಲ ಅದು ನನಗೆ ಪೋನ್ ಇಡುವಂತೆ ಜೋರು ಮಾಡಿರುವುದು” ಎಂದು ತಿಳಿಸಿರುತ್ತಾರೆ.
ಆನಂತರ ಪ್ರಜ್ವಲ್ ಅಲ್ಲಿಂದ ಹೊರಗಡೆ ಹೋದವನು ಸ್ವಲ್ಪ ಸಮಯದ ನಂತರ ವಾಪಾಸ್ಸು ಕೈಯಲ್ಲಿ ಕತ್ತಿಯಂತಹ ಆಯುಧವನ್ನು ಹಿಡಿದುಕೊಂಡು ಬಂದಿದ್ದಾನೆ. ಬಳಿಕ ಲಾಡ್ಜ್ ನ ಬಾಲ್ಕನಿಯಲ್ಲಿ ರಕ್ಷಿತ್ ನು ಪೋನ್ ನಲ್ಲಿ ಮಾತನಾಡುತ್ತಾ ನಿಂತಿದ್ದಾಗ ಪ್ರಜ್ವಲ್ ನು “ನಿನಗೆ ಎಷ್ಟು ಧೈರ್ಯ ನನ್ನನ್ನೇ ಕೀಳಾಗಿ ಮಾತನಾಡುತ್ತೀಯಾ.!!?” ಎಂದು ಹೇಳಿದಾಗ ಆತನ ಕೈಯಲ್ಲಿದ್ದ ಆಯುಧವನ್ನು ನೋಡಿ ಓಡಿಹೋಗಲು ಮುಂದಾದಾಗ ರಕ್ಷಿತ್ ನನ್ನು ತಡೆದು ಹಲ್ಲೆ ಮಾಡಲುಮುಂದಾಗಿದ್ದಾನೆ.
ಪ್ರಜ್ವಲ್ ನಿಂದ ತಪ್ಪಿಸಿಕೊಂಡು ಕೆಳಕಡೆ ಓಡುವ ಸಂದರ್ಭ ಲಾಡ್ಜ್ ನ ಮೆಟ್ಟಲಿನಲ್ಲಿ ರಕ್ಷಿತ್ ಕಾಲು ಜಾರಿ ಬಿದ್ದಿದ್ದು, ಬಳಿಕ ಎದ್ದು ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗಿರುತ್ತಾರೆ. ನಂತರ ಪ್ರಜ್ವಲ್ ನು “ನನ್ನ ತಂಟೆಗೆ ಯಾರು ಬಂದರೂ ಕೊಲ್ಲದೇ ಬಿಡುವುದಿಲ್ಲ” ಎಂದು ಹೇಳಿ ಅಲ್ಲಿಂದ ದಿನಕರ್ ಮತ್ತು ಅವರ ಸ್ನೇಹಿತರಿಗೆ ಕೆಟ್ಟ ಪದಗಳಿಂದ ಬೈಯುತ್ತಾ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋಗಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪ್ರಜ್ವಲ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.