ನ್ಯೂಸ್ ನಾಟೌಟ್ : ರಾಜ್ಯದ ಬಡ ಜನತೆಗೆ 10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿ ರಾಜ್ಯದ ಜನತೆಗೆ ಮೋಸ ಮಾಡುತ್ತಿದ್ದಾರೆ. ದೋಖಾ ಕಾರ್ಯಕ್ರಮ ಘೋಷಿಸಿ ಮಾತು ತಪ್ಪಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ಸರಕಾರದ ವಿರುದ್ಧ ಆರೋಪಿಸಿದ್ದಾರೆ.
ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರೈತರು, ಬಡವರು ಬಿಪಿಎಲ್ ಕಾರ್ಡ್ದಾರದರ ಆಪಾದನೆಯಿಂದ ಪಾರಾಗಲು ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಕೇಂದ್ರ ಸರಕಾರದ ಫುಡ್ ಸೇಕ್ರೆಡ್ ಆಕ್ಟ್ ಪ್ರಕಾರ ಯಾವುದೇ ಖರ್ಚು ಇಲ್ಲದೆ ರೇಷನ್ ಕೊಡುತ್ತಾ ಬಂದಿದೆ. 5 ಕೆಜಿ ಕೇಂದ್ರ ಸರಕಾರದಿಂದ ಸೇರಿಸಿ 10 kg ಕೊಡುತ್ತಿದ್ದೇವೆ ಎಂದು ಹೇಳಬೇಕಿತ್ತು.ಡಿಸೆಂಬರ್ ನಿಂದ ಗರೀಬ್ ಕಲ್ಯಾಣದಿಂದ 10kg ಅಕ್ಕಿ ಕೊಟ್ಟಿದ್ದೇವೆ. ಜುಲೈ ತಿಂಗಳಿನಿಂದ 10 KG ಅಕ್ಕಿ ನೀಡದೇ ಹೋದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
5 ಕೆ.ಜಿ ಅಕ್ಕಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕೊಡುತ್ತಿದೆ. ಕರೊನಾ ಸಂದರ್ಭದಲ್ಲಿ 10ಕೆ.ಜಿ ಕೇಂದ್ರವೇ ಕೊಟ್ಟಿದೆ ಎಂದ ಅವರು, ಡಿಸೆಂಬರ್ ತಿಂಗಳವರೆಗೂ ಕೇಂದ್ರವೇ ನೀಡಿದೆ. ಬಳಿಕ ನಾವು ಖರೀದಿ ಕೂಡ ಮಾಡಿದ್ದೆವು. ಅದಾದ ನಂತರ ನಾನು ಪತ್ರ ಬರೆದಿದ್ದೆ. ಈ ಪತ್ರ ಮಾರ್ಚ್ವರೆಗೂ ಅನ್ವಯ ಆಗಲಿದೆ. FCI ಅಥವಾ ಟೆಂಡರ್ ಮುಖಾಂತರ ಖರೀದಿ ಮಾಡಿ ಅಂತ ಅಧಿಕಾರಿಗಳಿಗೆ ಬರೆದಿದ್ದೆ. ಅದು ಏನಾಗಿದೆ ಅಂತ ನನಗೆ ಗೊತ್ತಿಲ್ಲ” ಎಂದು ವಿವರಿಸಿದರು.
ಕೇಂದ್ರದ ವಿವಿಧ ಯೋಜನೆಯಲ್ಲಿ ಅಕ್ಕಿ ಹೇಗೆ ಹಂಚಬೇಕು ಅನ್ನೋದು ಅವರಿಗೆ ಚೆನ್ನಾಗಿ ಗೊತ್ತಿದೆ. ರಾಜಕಾರಣ ಮಾಡ್ತಿರೋದು ಕೇಂದ್ರ ಅಲ್ಲ, ಇವರು. ಆಹಾರ ಖರೀದಿ ಮಾಡಿ 10 ಕೆ.ಜಿ ಅಕ್ಕಿ ಕೊಡಲಿ. ಆಗದಿದ್ರೆ ಜನರ ಅಕೌಂಟಿಗೆ ಹಣ ಜಮೆ ಮಾಡಿ. ಜುಲೈ ತಿಂಗಳಿನಲ್ಲಿ ರಾಜ್ಯದ ಜನರಿಗೆ ಅಕ್ಕಿ ಕೊಡಲಿಲ್ಲ ಅಂದ್ರೆ ನಾವು ಜನರನ್ನ ಸೇರಿಸಿ ಹೋರಾಟ ಮಾಡುತ್ತೇವೆ” ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ಕೊಟ್ಟಿದ್ದಾರೆ.