ನ್ಯೂಸ್ ನಾಟೌಟ್: ಕರ್ನಾಟಕ-ಕೇರಳ ಗಡಿಭಾಗದ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಸೂಕ್ಷ್ಮ ಪ್ರದೇಶಗಳಿಗೆ ಕಣ್ಣೂರು ವಲಯ ಡಿಐಜಿ ವಿಮಲಾದಿತ್ಯ ಭೇಟಿ ನೀಡಿ ಪರಿಶೀಲಿಸಿದರು. ಸೂಕ್ಷ್ಮ ಪ್ರದೇಶವಾದ ಮಂಜೇಶ್ವರಕ್ಕೆ ಹೆಚ್ಚುವರಿಯಾಗಿ 20 ಪೊಲೀಸ್ ಹಾಗೂ ಎರಡು ಫ್ಲೆಯಿಂಗ್ ಸ್ಕ್ಯಾಡ್ ಜೀಪುಗಳನ್ನೂ ಮಂಜೂರುಗೊಳಿಸಲಾಗಿದೆ.
ಡಿಐಜಿ ಮೀಯಪದವು, ಮೊರತ್ತನೆ, ಪೈವಳಿಕೆ ಮೊದಲಾದ ಸ್ಥಳಗಳಿಗೆ ಭೇಟಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೆನಾ, ಡಿವೈಎಸ್ಪಿಪಿ ಕೆ. ಸುಧಾಕರನ್ ಜೊತೆಗಿದ್ದರು.
ಉಪ್ಪಳಕ್ಕೆ ಒಂದು ಫ್ಲೆಯಿಂಗ್ ಸ್ಕ್ಯಾಡ್ ಜೀಪು ಒದಗಿಸಲು ಶಿಫಾರಸು ಮಾಡಲಾಗಿದೆ. ಕುಂಜತ್ತೂರು, ಮಾಡ, ವಾಮಂಜೂರು, ತಲಪ್ಪಾಡಿ, ಪೈವಳಿಕೆ, ಬಾಯಾರ್, ಮುಳಿಗದ್ದೆ, ಮೊರತ್ತನೆ ಮೊದಲಡೆಗಳಲ್ಲಿ ಹಗಲು-ರಾತ್ರಿ ತಪಾಸಣೆ ನಡೆಸಲಾಗುವುದು. ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ತಪಾಸಣೆ ಚುರುಕುಗೊಳಿಸಲಾಗಿದೆ. ಗಡಿ ಪ್ರದೇಶಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಪೈವಳಿಕೆಯಲ್ಲಿ ಐವರು ಪೊಲೀಸರನ್ನು ಖಾಯಂ ಆಗಿ ನೇಮಿಸಲಾಗುವುದು. ರಾತ್ರಿ ಸಮಯಗಳಲ್ಲಿ ವಾಹನ ತಪಾಸಣೆ ನಡೆಸಲಾಗುವುದು.