ನ್ಯೂಸ್ ನಾಟೌಟ್: ಪುತ್ತೂರು ತಾಲೂಕಿನ ಕಾವು ಎಂಬಲ್ಲಿ ಗ್ರಾಮ ಪಂಚಾಯತ್ ನೀರು ಪೂರೈಕೆಯ ಸಿಮೆಂಟ್ ಟ್ಯಾಂಕಿಯ ಒಳಗಡೆ ಅಪರಿಚಿತ ವ್ಯಕ್ತಿಯ ಶವ ಕೊಳೆತ ಸ್ಥಿತಯಲ್ಲಿ ಪತ್ತೆಯಾಗಿದೆ.
ಮಾಡ್ನೂರು ಗ್ರಾಮದ ತೋಟದಮೂಲೆ ಎಂಬಲ್ಲಿರುವ ಗ್ರಾಮ ಪಂಚಾಯತ್ ನ ನೀರು ಸರಬರಾಜಿನ ಸಿಮೆಂಟ್ ಟ್ಯಾಂಕಿಯೊಳಗಡೆ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.ಪರಿಸರದಲ್ಲಿ ದುರ್ನಾತ ಬೀರುತ್ತಿದ್ದುದರಿಂದ ಸ್ಥಳೀಯರು ಸಂಶಯಗೊಂಡು ಟಾಂಕಿಯನ್ನು ನೋಡಿದಾಗ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿರುವ ಗಂಡಸಿನ ಶವ ಪತ್ತೆಯಾಗಿದೆ. ಟಾಂಕಿನ ಮೇಲಿನ ಭಾಗದಲ್ಲಿ ಕೇಸರಿ ಬಣ್ಣದ ಲುಂಗಿಯೊಂದು ಪತ್ತೆಯಾಗಿದೆ.ಟಾಂಕಿಯ ಒಳಗಡೆ ಸ್ವಚ್ಛ ಮಾಡಲೆಂದು ಇಳಿಯಲು ಉಪಯೋಗಿಸುತ್ತಿದ್ದ ಏಣಿ ನಾಪತ್ತೆಯಾಗಿದ್ದು,ಈ ಘಟನೆ ಇದು ಹಲವು ಅನುಮಾನಗಳಿಗೆ ಕಾರಣವಾಗಿರುವುದರಿಂದ ಈ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರೆಂದು ತಿಳಿದು ಬಂದಿದೆ.