ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಶೋಷಣೆಯಂತಹ ಪ್ರಕರಣಗಳು ಹೆಚ್ಚಾಗುತ್ತಿದೆ. ಮಹಿಳೆಯರಿಗೆ ರಕ್ಷಣೆ ಇಲ್ಲ ಅನ್ನುವ ಕೂಗು ಕೇಳಿ ಬರುತ್ತಿದೆ. ಇಂತಹ ಸನ್ನಿವೇಶದಲ್ಲಿ ಹದಿನೈದು ವರ್ಷದ ಬಾಲಕಿಯೊಬ್ಬಳು ಮಹಿಳೆಯರನ್ನು ಅತ್ಯಾಚಾರಿಗಳಿಂದ ರಕ್ಷಿಸುವುದಕ್ಕೆ ಹೊಸ ತಂತ್ರಜ್ಞಾನವನ್ನು ಅನ್ವೇಷಣೆ ಮಾಡಿದ್ದಾಳೆ. ಚಪ್ಪಲಿಯಿಂದ ಕಿಡಿಗೇಡಿಗಳನ್ನು ಹದರಿಸುವುದು ಮಾತ್ರವಲ್ಲ. ಸಮಯ ಬಂದರೆ ವಿದ್ಯುತ್ ಶಾಕ್ ಕೊಟ್ಟು ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು ಅನ್ನುವುದನ್ನು ತೋರಿಸಿಕೊಟ್ಟಿದ್ದಾಳೆ.
ಕಲಬುರಗಿಯ ಬಾಲಕಿಯಬ್ಬಳು ಭಾರೀ ಸುದ್ದಿಯಲ್ಲಿದ್ದಾಳೆ. ಇದಕ್ಕೆ ಕಾರಣ ಆಕೆ ಸತತ ಪ್ರಯತ್ನದಿಂದ ನಡೆಸಿರುವ ಅವಿಷ್ಕಾರ. ಈಕೆ ತಯಾರಿಸಿರುವ ಕರೆಂಟ್ ಚಪ್ಪಲಿಯೂ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಸದ್ದು ಮಾಡುತ್ತಿದೆ. ಕಲಬುರಗಿ ವಿದ್ಯಾರ್ಥಿಯಾದ ವಿಜಯಲಕ್ಷ್ಮಿ ಬಿರಾದಾರ್(೧೫) ಮಹಿಳೆಯರ ಸುರಕ್ಷತೆಗಾಗಿಯೇ ಸಿದ್ದಪಡಿಸಿರುವ ” ಆ್ಯಂಡಿ ರೇಪ್ ಫುಟ್ ವೇರ್” ಕರೆಂಟ್ ಮಾದರಿ ಚಪ್ಪಲನ್ನು ಕಂಡು ಹಿಡಿದಿದ್ದಾಳೆ. ಬ್ಯಾಟರಿ ,ಸೆಲ್ ಬಳಸಲಾಗಿದ್ದು ಮಹಿಳೆ ಚಪ್ಪಲಿಗಳನ್ನು ಧರಿಸಿ ನೆಡಯುವಾಗಲೇ ಇದರ ಬ್ಯಾಟರಿಗಳು ಚಾರ್ಜ್ ಆಗುವಂತೆ ರೂಪಿಸಲಾಗಿದೆ. ಯುವತಿ ಕಾಲಿನ ಹೆಬ್ಬೆರಳ ಜಾಗದಲ್ಲಿ ಚಿಕ್ಕದಾದ ಗುಂಡಿ ಇದ್ದು ಮಹಿಳೆ ತನ್ನ ಕಾಲ ಬೆರಳಿನಿಂದಲೇ ಗುಂಡಿ ಅದುಮಿದರೆ ಸಾಕು ಆಕೆಯ ಚಪ್ಪಲಿಯಿಂದ ೦.೫ ಆಂಪಿಯರ್ನಷ್ಟು ವಿದ್ಯುತ್ಚ್ಚಕ್ತಿ ಉತ್ಪತ್ತಿಯಾಗಿ ಹೊರಹೊಮ್ಮುತ್ತದೆ. ಹೀಗೆ ಮಹಿಳೆಯ ಮೇಲೆರಗಿದ ಅತ್ಯಾಚಾರಿಗೆ ಈ ವೇಳೆ ವಿದ್ಯುತ್ ಶಾಕ್ ಅನುಭವ ಆಗುತ್ತದೆ ಎಂದು ಬಾಲಕಿ ತನ್ನ ಪ್ರಯೋಗದಲ್ಲಿ ತೋರಿಸಿದ್ದಾಳೆ. ಈ ಬಗ್ಗೆ ರಾಜ್ಯದ ವಿವಿಧ ಮಾಧ್ಯಮಗಳು ವರದಿ ಮಾಡಿವೆ.