ನ್ಯೂಸ್ ನಾಟೌಟ್ : ಕಾಡಿನೊಳಗೆ ನುಗ್ಗಿ ಪ್ರಾಣಿಗಳನ್ನು ಭೇಟೆಯಾಡುವುದು ಕಾನೂನು ಪ್ರಕಾರ ಅಪರಾಧ ಎನ್ನುವುದು ಗೊತ್ತಿದ್ದರೂ ಲೆಕ್ಕಿಸದೆ ಅರಣ್ಯದೊಳಕ್ಕೆ ನುಗ್ಗಿ ಕಡವೆ ಬೇಟೆಯಾಡಿದವರನ್ನು ಸಂಪಾಜೆ ವಲಯ ಅರಣ್ಯಾಧಿಕಾರಿಗಳು ಮಾಂಸ ಸಹಿತ ಬಂಧಿಸಿದ್ದಾರೆ.
ದಬ್ಬಡ್ಕ ಗ್ರಾಮ ನಿವಾಸಿಗಳಾದ ಕೃಷ್ಣಪ್ಪ(47), ಪುರುಷೋತ್ತಮ ಕೆ.ಎಸ್.(48) ಬಂಧಿತ ಆರೋಪಿಗಳು. ಬಂಧಿತರಿಂದ 100 ಕೆ.ಜಿ ಕಡವೆ ಮಾಂಸ, ಕತ್ತಿ, ಟಾರ್ಪಲ್ ಸೇರಿದಂತೆ ಮತ್ತಿತ್ತರ ವಸ್ತುಗಳ ವಶ ಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ದ ವನ್ಯ ಜೀವಿ ಸಂರಕ್ಷಣಾ ಕಾಯಿದೆ ಅಡಿ ಪ್ರಕರಣ ದಾಖಲು ಮಾಡಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ ಹಾಗೂ ಸಂಪಾಜೆ ವಲಯ ಅರಣ್ಯಾಧಿಕಾರಿ ಮಧುಸೂದನ್ ಎಂ.ಕೆ. ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಅರಣ್ಯ ರಕ್ಷಕರಾದ ಕಾರ್ತಿಕ್, ವೀಕ್ಷಕರಾದ ಕೂಸಪ್ಪ, ಮನೋಜ್ ಕುಮಾರ್, ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.