ನ್ಯೂಸ್ ನಾಟೌಟ್: ಬಹಳಷ್ಟು ಸಮಯದ ನಂತರ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಗಡಿ ಭಾಗವಾಗಿರುವ ಕೊಯನಾಡು ಹಾಗೂ ಸಂಪಾಜೆಯ ಕೆಲವು ಭಾಗಗಳಲ್ಲಿ ಮತ್ತೆ ಭೂಕಂಪನ ಹಾಗೂ ಭಾರಿ ಶಬ್ಧ ಕೇಳಿದ ಅನುಭವವಾಗಿದೆ.
ಈ ಕುರಿತಂತೆ ನ್ಯೂಸ್ ನಾಟೌಟ್ ಜತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲುಗುಂಡಿಯ ಚಟ್ಟೆಕಲ್ಲು ನಿವಾಸಿಗಳು ಜೋರು ಶಬ್ಧವಾಗಿರುವ ಮಾಹಿತಿ ನೀಡಿದ್ದರೆ ಕೊಡಗಿನ ಕೊಯನಾಡಿನ ಮಂಗಳಪಾರೆ ಎಂಬಲ್ಲಿಂದ ಓದುಗರು ಕಂಪನದ ಅನುಭವ ಹಂಚಿಕೊಂಡಿದ್ದಾರೆ. ಭಾನುವಾರ ಸಂಜೆ ಸಮಯ 6.20 ಕ್ಕೆ ಕಂಪನದ ಅನುಭವ ಆಗಿದೆ ಎಂದು ತಿಳಿದು ಬಂದಿದೆ. ಸುಳ್ಯ ತಾಲೂಕಿನ ಕೆಲವು ಭಾಗಗಳಲ್ಲಿಯೂ ಕಂಪನ ಆಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಭೂ ತಜ್ಞರು ಇನ್ನಷ್ಟೇ ಖಚಿತಪಡಿಸಬೇಕಿದೆ. ಕಳೆದ ಒಂದೂವರೇ ತಿಂಗಳ ಹಿಂದೆ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗ ಸೇರಿದಂತೆ ಸುಳ್ಯದ ಹಲವು ಕಡೆ ಕಂಪನದ ಅನುಭವ ಆಗಿದ್ದನ್ನು ಸ್ಮರಿಸಬಹುದು