ನ್ಯೂಸ್ ನಾಟೌಟ್ : ಮಡಿಕೇರಿ -ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನಗಳ ಪ್ರಯಾಣಕ್ಕೆ ಹೇರಿದ್ದ ನಿರ್ಬಂಧವನ್ನು ಕೊಡಗು ಜಿಲ್ಲಾಧಿಕಾರಿಗಳು ಹಿಂದಕ್ಕೆ ಪಡೆದುಕೊಂಡಿದ್ದಾರೆ.
ಇದರೊಂದಿಗೆ ವಾಹನ ಸವಾರರು ಯಾವುದೇ ಸಮಯದಲ್ಲಿ ನಿರಾತಂಕವಾಗಿ ವಾಹನವನ್ನು ಚಲಾಯಿಸಿಕೊಂಡು ಹೋಗಬಹುದಾಗಿದೆ. ಮದೆನಾಡಿನಲ್ಲಿ ಗುಡ್ಡ ಕುಸಿತದ ಭೀತಿಯಿಂದ ರಸ್ತೆ ಸಂಪರ್ಕವನ್ನು ರಾತ್ರಿಯ ವೇಳೆ ನಿಷೇಧಿಸಲಾಗಿತ್ತು. ಆದರೆ ಇದೀಗ ಗುಡ್ಡವನ್ನು ಕ್ಲೀಯರ್ ಮಾಡುವ ಕೆಲಸ ನಡೆಯುತ್ತಿದೆ. ಜತೆಗೆ ವಾಹನ ಸವಾರರಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರಿಂದ ಆತಂಕವಿಲ್ಲ ಎಂದು ತಿಳಿದು ಬಂದಿದೆ.